US Open Tennis 2022- ಪೊಲೆಂಡ್ ನ ಪೋರಿ ಐಗಾ ಸ್ವಿಟೆಕ್ ಮುಡಿಗೆ ಯುಎಸ್ ಓಪನ್ ಕಿರೀಟ..!

ವಿಶ್ವದ ನಂಬರ್ ವನ್ ಆಟಗಾರ್ತಿ ಐಗಾ ಸ್ವಿಟೆಕ್ ಅವರು ಪ್ರತಿಷ್ಠಿತ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪೊಲೆಂಡ್ ಐಗಾ ಸ್ವಿಟೆಕ್ ಅವರು 6-2, 7-6ರಿಂದ ಟ್ಯುನೇಶಿಯಾದ ಒನ್ಸ್ ಜಬ್ಯುರ್ ಅವರನ್ನು ಪರಾಭವಗೊಳಿಸಿದ್ರು. ಈ ಮೂಲಕ ಐಗಾ ಸ್ವಿಟೆಕ್ ಅವರು ಚೊಚ್ಚಲ ಬಾರಿ ಯುಎಸ್ ಓಪನ್ ಪ್ರಶಸ್ತಿ ಗೆದ್ದ ಹಿರಿಮೆಗೆ ಪಾತ್ರರಾದ್ರು. ಅಲ್ಲದೆ ಯುಎಸ್ ಓಪನ್ ಪ್ರಶಸ್ತಿ ಗೆದ್ದ ಮೊದಲ ಪೊಲೆಂಡ್ ಆಟಗಾರ್ತಿಯಾಗಿದ್ದಾರೆ.
21ರ ಹರೆಯದ ಐಗಾ ಸ್ವಿಟೆಕ್ ಅವರು ಈ ಹಿಂದೆ ಎರಡು ಬಾರಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದರು. ಇದೀಗ ಮೂರನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಇನ್ನು ಮಿಕ್ಸೆಡ್ ಡಬಲ್ಸ್ ನಲ್ಲಿ ಆಸ್ಟ್ರೇಲಿಯಾದ ಜಾನ್ ಪೀರ್ಸ್ ಮತ್ತು ಸ್ಟಾರ್ಮ್ ಸ್ಯಾಂಡರ್ಸ್ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್ ನಲ್ಲಿ ಜಾನ್ ಪೀರ್ಸ್ ಮತ್ತು ಸ್ಟಾರ್ಮ್ ಸ್ಯಾಂಡರ್ಸ್ 4-6, 6-4, 10-7ರಿಂದ ಬೆಲ್ಜಿಯಂ ನ ಕಿಸ್ಟರ್ನ್ ಫ್ಲಿಪ್‍ಕೆನ್ಸ್ ಮತ್ತು ಫ್ರಾನ್ಸ್ ನ ಎಡ್ವರ್ಡ್ ರೋಜರ್ ಅವರನ್ನು ಪರಾಭವಗೊಳಿಸಿದ್ರು.
ಇನ್ನು ಪುರುಷರ ಫೈನಲ್ಸ್ ನಲ್ಲಿ ರೂಡ್ ಮತ್ತು ಕಾಲೊರ್ಸ್ ನಡುವೆ ನಡೆಯಲಿದೆ.