ಭಾರತದ ತಾರಾ ಶಟ್ಲರ್ಗಳಾದ ಪಿ.ವಿ.ಸಿಂಧು ಮತ್ತು ಲಕ್ಷ್ಯಸೇನ್ ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಪ್ರವೇಶಿಸಿದ್ದಾರೆ. ಡಬಲ್ ಒಲಿಂಪಿಕ್ ಪದಕ ವಿಜೇತೆ ಸಿಂಧು ಕೊರಿಯದ ಸಂಗ್ ಶುಹೊ ಯನ್ ವಿರುದ್ಧ 21-14, 21-12 ಅಂಕಗಳಿಂದ ಗೆದ್ದರು.
ಸಂಗ್ ವಿರುದ್ಧ ಸಿಂಧು ಹೆಚ್ಚೇನು ಶ್ರಮಪಡಲಿಲ್ಲ. ಆರಂಭದಲ್ಲೆ ಸಿಂಧು 7-2 ಮುನ್ನಡೆ ಪಡೆದರು. ನಂತರ 13-5 ಅಂಕಗಳ ಅಂತರ ಹೆಚ್ಚಿಸಿಕೊಂಡರು. ಸಂಗ್ 11-14 ಸಮೀಪಿಸಿದರು. ಆದರೆ ಸಿಂಧು ಎಚ್ಚೆತ್ತು ಆಡಿ ಮೊದಲ ಸುತ್ತು ಗೆದ್ದರು.ಎರಡನೆ ಸೆಟ್ನಲ್ಲಿ ಸಿಂಧು 11-8 , 16-12 ಅಂಕಗಳಿಮದ ಮುನ್ನಡೆ ಪಡೆದರು.
ಟೂರ್ನಿಯಲ್ಲಿ ಮೂರನೆ ಶ್ರೇಯಾಂಕಿತೆಯಾಗಿರುವ ಹೈದ್ರಾಬಾದ್ ಅಟಗಾರ್ತಿ ಸಿಂಧು ಕ್ವಾರ್ಟರ್ನಲ್ಲಿ ಗಾವೊ ಅವರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೆನಡಾ ಓಪನ್ ಚಾಂಪಿಯನ್ ಲಕ್ಷ್ಯಸೇನ್ ಜೆಕ್ ರಿಪಬ್ಲಿಕ್ನ ಜಾನ ಲೂಡಾ ವಿರುದ್ಧ 21-8, 23-21 ಅಂಕಗಳಿಂದ ಗೆದ್ದುಕೊಂಡರು.
ಆರಂಭಿಕ ಸುತ್ತಿನಲ್ಲಿ ಲಕ್ಷ್ಯಸೇನ್ 6-1 ಮುನ್ನಡೆ ಪಡೆದರು. ನಂತರ 17-5 ಅಂಕಗಳಾಗಿ ಪರಿವರ್ತಿಸಿದರು. ನಂತರ ಸುಲಭವಾಗಿ ಗೆದ್ದರು. ಎರಡನೆ ಸುತ್ತಿನಲ್ಲಿ ಲುಡಾ ಭಾರತದ ಆಟಗಾರನಿಗೆ ಕಠಿಣ ಸವಾಲು ನೀಡಿದರು. 8-5 ಮುನ್ನಡೆ ಪಡೆದರು.
ನಂತರ 19-14 ಅಂಕಗಳಿಸಿ ಗೆಲುವಿನತ್ತ ಸಾಗಿದರು. ಎಚ್ಚೆತ್ತ ಲಕ್ಷ್ಯಸೇನ್ 19-19 ಅಂಕ ಸಮಗೊಳಿಸುವಲ್ಲಿ ಯಶಸ್ವಿಯಾದರು. ನಂತರ ಗೇಮ್ ಪಾಯಿಂಟ್ ಕಾಪಾಡಿ ಪಂದ್ಯ ಗೆದ್ದರು.