US Open 2022 women singles – ಪ್ರಶಸ್ತಿಗಾಗಿ ಐಗಾ ಸ್ವಿಟೆಕ್ ಮತ್ತು ಜಬ್ಯುರ್ ನಡುವೆ ಫೈಟ್

ಪೊಲೆಂಡ್ ನ ಐಗಾ ಸ್ವಿಟೆಕ್ ಮತ್ತು ಟ್ಯುನೆಶಿಯಾದ ಒನ್ಸ್ ಜಬ್ಯುರ್ ಅವರು 2022ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯ ಸೆಪ್ಟಂಬರ್ 9ರಂದು ನಡೆಯಲಿದೆ.
ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಆಟಗಾರ್ತಿ ಐಗಾ ಸ್ವಿಟೆಕ್ 3-6, 6-1, 6-4ರಿಂದ ಬೆಲರಾಸ್ ನ ಆರ್ಯಾನಾ ಸಬಾಲೆಂಕಾ ಅವರನ್ನು ಸೋಲಿಸಿದ್ರು. ಈ ಮೂಲಕ ಯುಎಸ್ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಮೊದಲ ಪೊಲೆಂಡ್ ನ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಟ್ಯುನೆಶಿಯಾ ಒನ್ಸ್ ಜಬ್ಯುರು ಅವರು 6-1, 6-3ರಿಂದ ಫ್ರಾನ್ಸ್ ನ ಕರೊಲಿನಾ ಗಾರ್ಸಿಯಾ ಅವರನ್ನು ಮಣಿಸಿದ್ರು. ಇದರೊಂದಿಗೆ ಯುಎಸ್ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಆಫ್ರಿಕಾದ ಮೊದಲ ಆಟಗಾರ್ತಿಯಾಗಿದ್ದಾರೆ.
ಇನ್ನೊಂದೆಡೆ ಐಗಾ ಸ್ವಿಟೆಕ್ ಅವರು ಇದೀಗ ಮೂರನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯತ್ತ ಚಿತ್ತವನ್ನಿಟ್ಟಿದ್ದಾರೆ. ಈ ಹಿಂದೆ ಸ್ವಿಟೆಕ್ ಅವರು ಎರಡು ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಹಾಗೇ ಸ್ವಿಟೆಕ್ ಮತ್ತು ಜಬ್ಯುರ್ ಅವರು ಈಗಾಗಲೇ ನಾಲ್ಕು ಬಾರಿ ಮುಖಾಮುಖಿಯಾಗಿದ್ದು 2-2ರಿಂದ ಸಮಬಲದ ಪ್ರದರ್ಶನವನ್ನು ನೀಡಿದ್ದರು.