US Open 2022- ಡಾಮಿನಿಕ್ ಥಿಮ್ ಗೆ ಆಘಾತ.. ಮೆಡ್ವೆಡೇವ್, ಮುರ್ರೆ ಮುನ್ನಡೆ

ಹಿರಿಯ ಆಟಗಾರ ಬ್ರಿಟನ್ ನ ಆಂಡಿ ಮುರ್ರೆ ಅವರು ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಆಂಡಿ ಮುರ್ರೆ ಅವರು 7-5, 6-3, 6-3ರಿಂದ ಅರ್ಜೆಂಟಿನಾದ ಫ್ರಾನ್ಸಿಸ್ಕೊ ಸೆರುಂಡೊಲ್ ಅವರನ್ನು ಸೋಲಿಸಿದ್ರು.
ಇನ್ನು ಚೀನಾದ ಯಿಬಿಂಗ್ ವು ಅವರು 6-3, 6-4, 6-0ಯಿಂದ ಅಮೆರಿಕಾದ ನಿಕೊಲೊಝ್ ಬಾಸಿಲಾಶ್ವೆಲ್ ಅವರನ್ನು ಸೋಲಿಸಿದ್ರು. ಈ ಮೂಲಕ ವು ಯಿಬಿಂಗ್ ಅವರು ಚೀನಾ ಪರ 63 ವರ್ಷಗಳ ಬಳಿಕ ಇದೇ ಮೊದಲ ಬಾರಿ ಗ್ರ್ಯಾಂಡ್ ಸ್ಲ್ಯಾಂ ಪಂದ್ಯ ಗೆದ್ದ ಹಿರಿಮೆಗೂ ಪಾತ್ರರಾಗಿದ್ದಾರೆ.
ಇನ್ನು ವಿಶ್ವದ ನಂಬರ್ ವನ್ ಆಟಗಾರ ಡೇನಿಲ್ ಮೆಡ್ವೇಡೇವ್ ಅವರು 6-2, 6-4, 6-0ಯಿಂದ ಅಮೆರಿಕಾದ ಸ್ಟೆಫನ್ ಕೊಝ್ಲೋವ್ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಸ್ಪೇನ್ ನ ಪಾಬ್ಲೊ ಕಾರೆನೊ ಬುಸ್ಟಾ 6-1, 5-7, 6-3ರಿಂದ 2020ರ ಚಾಂಪಿಯನ್ ಡಾಮಿನಿಕ್ ಥೀಮ್ ಅವರಿಗೆ ಆಘಾತ ನೀಡಿದ್ರು. ಕಳೆದ ಸ್ವಿಸ್ ಓಪನ್ ಟೂರ್ನಿಯಲ್ಲೂ ಪಾಬ್ಲೊ ಅವರು ಸೆಮಿಫೈನಲ್ ಪ್ರವೇಶಿಸಿದ್ದರು.
ಇನ್ನು ಕೊಲಂಬಿಯಾದ ಡೇನಿಯಲ್ ಗಲಾನ್ 6-0, 6-1, 3-6, 7-5ರಿಂದ ಗ್ರೀಸ್ ನ ಸ್ಟೆಫಾನೊಸ್ ಸಿಟ್ಸಿಪಾಸ್ ಅವರನ್ನು ಪರಾಭವಗೊಳಿಸಿದ್ರೆ, ಬ್ರೆಂಡನ್ ಹೊಲ್ಟ್ 6-7, 7-6, 6-3, 6-4ರಿಂದ ಅಮೆರಿಕಾದ ಟೇಲರ್ ಫಟ್ಝ್ ಅವರನ್ನು ಮಣಿಸಿದ್ರು. ಬ್ರೆಂಟನ್ ಹೋಲ್ಟ್ ಅವರು ಮಾಜಿ ಯುಎಸ್ ಓಪನ್ ಚಾಂಪಿಯನ್ ಟ್ರೆಸ್ ಆಸ್ಟಿನ್ ಅವರ ಮಗ. ಟ್ರೆಸ್ ಆಸ್ಟಿನ್ ಅವರು ಎರಡು ಬಾರಿ ಯುಎಸ್ ಓಪನ್ ಚಾಂಪಿಯನ್ ಆಗಿದ್ದರು.
ಇನ್ನೊಂದು ಸಿಂಗಲ್ಸ್ ನಲ್ಲಿ ಆಸ್ಟ್ರೇಲಿಯಾದ ನಿಕ್ ಕಾರ್ಗಿಸೊ 6-3, 6-4, 7-6ರಿಂದ ತನ್ನ ಆಪ್ತ ಗೆಳೆಯ ಥಾನಾಸಿ ಕೊಕಿನಾಕಿಸ್ ಅವರನ್ನು ಸೋಲಿಸಿ ಮುನ್ನಡೆ ಸಾಧಿಸಿದ್ದಾರೆ.