2000- ಮೊಹಮ್ಮದ್ ಕೈಫ್: ಟೀಮ್ ಇಂಡಿಯಾವನ್ನು ಪ್ರತಿನಿಧಿಸಿ, ಹಲವು ವರ್ಷ ತಂಡದ ಪ್ರಮುಖ ಆಟಗಾರನಾಗಿದ್ದ ಕೈಫ್ ಈಗ ರಾಜಕಾರಣಿಯಾಗಿ ಬದಲಾಗಿದ್ದಾರೆ. ದೇಶಿ ಕ್ರಿಕೆಟ್ನಲ್ಲಿ ಕೆಲ ವರ್ಷ ಉತ್ತರ ಪ್ರದೇಶ ಮತ್ತು ಚತ್ತೀಸ್ ಗಢ ತಂಡವನ್ನು ಪ್ರತಿನಿಧಿಸಿದ್ದರು.
2008: ವಿರಾಟ್ ಕೊಹ್ಲಿ: ವಿರಾಟ್ ಕೊಹ್ಲಿ ಅಂಡರ್ 19 ಗೆದ್ದು ಕೊಟ್ಟ ನಾಯಕರ ಪೈಕಿ ಅತೀ ಹೆಚ್ಚು ಯಶಸ್ಸು ಕಂಡ ಆಟಗಾರ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಅಲ್ಲದೆ ವಿಶ್ವದ ನಂಬರ್ ವನ್ ಕ್ರಿಕೆಟಿಗ ಸತತ 8 ವರ್ಷಗಳ ಕಾಲ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಕೀರ್ತಿ ವಿರಾಟ್ ಕೊಹ್ಲಿಯವರದ್ದು.
2012: ಉನ್ಮುಕ್ತ್ ಚಾಂದ್: ಆಸ್ಟ್ರೇಲಿಯಾವನ್ನು ಸೋಲಿಸಿ ಭಾರತಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟ ಉನ್ಮುಕ್ತ್ ಚಾಂದ್ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಡಲೇ ಇಲ್ಲ. ಐಪಿಎಲ್, ರಣಜಿಯಲ್ಲಿ ಸ್ಥಾನ ಪಡೆದರೂ ಸ್ಥಿರ ಆಟ ಆಡಲಿಲ್ಲ. ಸದ್ಯ ಚಾಂದ್ ಅಮೆರಿಕ ತಂಡದಲ್ಲಿ ಆಟ ಮುಂದುವರೆಸುತ್ತಿದ್ದಾರೆ.
2018: ಪೃಥ್ವಿ ಷಾ: ಪೃಥ್ವಿ ಷಾ ನಾಯಕತ್ವದ ತಂಡ 2018ರಲ್ಲಿ ಅಂಡರ್ 19 ಚಾಂಪಿಯನ್ ಆಗಿತ್ತು. ಆ ತಂಡದ ನಾಯಕನಾಗಿದ್ದ ಪೃಥ್ವಿ ಷಾ ಟೆಸ್ಟ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಐಪಿಎಲ್ ಮತ್ತು ದೇಶೀಯ ಟೂರ್ನಿಗಳಲ್ಲೂ ಪೃಥ್ವಿ ಸೂಪರ್ ಸ್ಟಾರ್. ಟೀಮ್ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುವ ಪ್ರಯತ್ನ ಪೃಥ್ವಿಯಿಂದ ನಡೆಯುತ್ತಿದೆ.
2022: ಯಶ್ ಧುಲ್: ವೆಸ್ಟ್ ಇಂಡೀಸ್ನಲ್ಲಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಮಾಡಿದ ನಾಯಕ ಯಶ್ ಧುಲ್ ಭವಿಷ್ಯದಲ್ಲಿ ಭಾರತದ ದೊಡ್ಡ ಆಸ್ತಿಯಾಗಬಹುದು. ಸದ್ಯ ಯಶ್ ದೆಹಲಿ ಜೂನಿಯರ್ ತಂಡದಲ್ಲಿದ್ದಾರೆ.