ಎರಡು ತಂಡಗಳು ವಿಭಿನ್ನ ಹಾದಿಯೊಂದಿಗೆ ಸೆಮಿಫೈನಲ್ (Semifinal) ಪ್ರವೇಶಿಸಿದೆ. ಇಂಗ್ಲೆಂಡ್ (England) ಬಲಿಷ್ಠ ಬ್ಯಾಟಿಂಗ್ ಪ್ರದರ್ಶನ ಹಾಗೂ ಸಂಘಟಿತ ಬೌಲಿಂಗ್ ದಾಳಿ ಮೂಲಕ ಅಜೇಯ ತಂಡವಾಗಿ ಅಂತಿಮ 4ರ ಘಟ್ಟ ಪ್ರವೇಶಿಸಿದೆ. ಮತ್ತೊಂದು ಕಡೆ ಅಫ್ಘಾನಿಸ್ತಾನ (Afghanistan) ಪಾಕ್ ವಿರುದ್ಧದ ಸೋಲು, ನಂತರ ಬೌಲಿಂಗ್ ಮೂಲಕವೇ ಸೆಮಿಫೈನಲ್ ಪ್ರವೇಶಿಸಿದೆ. ಹೀಗಾಗಿ ನಾರ್ತ್ಸೌಂಡ್ನಲ್ಲಿ ನಡೆಯಲಿರುವ ಸೆಮಿಫೈನಲ್ ಕುತೂಹಲ ಕೆರಳಿಸಿದೆ.
ಇಂಗ್ಲೆಂಡ್ ಬ್ಯಾಟಿಂಗ್ನಲ್ಲಿ ಸ್ಪೋಟಕ ಶಕ್ತಿ ಹೊಂದಿದೆ. ನಾಯಕ ಟಾಮ್ ಪ್ರೆಸ್ಟ್ (Tom Prest) ಟೂರ್ನಿಯಲ್ಲಿ ಅತೀ ಹೆಚ್ಚು ರನ್ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಜಾಕೊಬ್ ಬೊಥೆಲ್ (Jacon Bothel) ಮತ್ತು ವಿಲಿಯಂ ಲಕ್ಸ್ಟನ್ (William Luxton)ಸ್ಪೋಟಕ ಬ್ಯಾಟಿಂಗ್ ಜೊತೆಗೆ ಸ್ಥಿರ ಪ್ರದರ್ಶನವನ್ನು ನೀಡಿದ್ದಾರೆ. ಜಾರ್ಜ್ ಥಾಮಸ್ (George Thomas) ಮತ್ತು ಜೇಮ್ಸ್ ರಿವ್ (James Reev) ಕೂಡ ಸ್ಥಿರ ಆಟ ಆಡಿದ್ದಾರೆ. ಇಂಗ್ಲೆಂಡ್ 50 ಓವರುಗಳ ಕಾಲ ಬ್ಯಾಟಿಂಗ್ ನಡೆಸಿದರೆ ರನ್ ಮಳೆ ಗ್ಯಾರೆಂಟಿ. ಬೌಲಿಂಗ್ನಲ್ಲೂ ಇಂಗ್ಲೆಂಡ್ ಸಖತ್ ಸ್ಟ್ರಾಂಗ್ ಆಗಿದೆ.
ಅಫ್ಘಾನಿಸ್ತಾನ ತಂಡ ಸ್ಪಿನ್ ಬೌಲಿಂಗ್ ಅನ್ನು ಹೆಚ್ಚು ನೆಚ್ಚಿಕೊಂಡಿದೆ. ಚೈನಾಮನ್ ನೂರ್ ಅಹ್ಮದ್ (Noor Ahmad), ಲೆಗ್ ಸ್ಪಿನ್ನರ್ ಇಝರುಲ್ ಹಕ್ ನವೀದ್ ಮತ್ತು ಎಡಗೈ ಸ್ಪಿನ್ನರ್ ಖರೋಟೆ ಮೂಲಕವೇ ಹೆಚ್ಚಿನ ಪಂದ್ಯ ಗೆದ್ದಿದೆ. ಬ್ಯಾಟಿಂಗ್ನಲ್ಲಿ ಅಫ್ಘಾನ್ ತಂಡ ಮಿಂಚಿಲ್ಲ. ಸುಲಿಮನ್ ಸಫಿ ಮಾತ್ರ ತಂಡಕ್ಕೆ ಆಸರೆ ಆಗಿದ್ದರು. ಹೀಗಾಗಿ ಇಂಗ್ಲೆಂಡ್ ತಂಡವನ್ನು ಸ್ಪಿನ್ ಮೂಲಕವೇ ಕಟ್ಟಿ ಹಾಕುವ ಲೆಕ್ಕಾಚಾರ ಅಫ್ಘಾನ್ ತಂಡಕ್ಕಿದೆ.
ನಾರ್ತ್ ಸೌಂಡ್ನಲ್ಲಿ(North Sound) ಮಳೆಯ ಮುನ್ಸೂಚನೆ ಇದೆ. ಒಂದು ವೇಳೆ ಪಂದ್ಯ ರದ್ದುಗೊಂಡರೆ ಗ್ರೂಪ್ ಹಂತದಲ್ಲಿ ಇಂಗ್ಲೆಂಡ್ ನೀಡಿದ ಪ್ರದರ್ಶನದ ಆಧಾರದ ಮೇಲೆ ಫೈನಲ್ಗೆ ತೇರ್ಗಡೆ ಆಗಲಿದೆ.