ಇತ್ತೀಚೆಗೆ ನಡೆದ ಟಿ20 ವಿಶ್ವಕಪ್(T20 World Cup) ಪಂದ್ಯಾವಳಿ ಮುಕ್ತಾಯಗೊಂಡ ಬೆನ್ನಲ್ಲೇ, ಡಿಸೆಂಬರ್ 1ರಿಂದ ಸಾಲು ಸಾಲು ಟೆಸ್ಟ್ ಕ್ರಿಕೆಟ್ ಸರಣಿಗಳು ಆರಂಭವಾಗಲಿದ್ದು, ಟೀಂ ಇಂಡಿಯಾ(Team India) ಸೇರಿದಂತೆ ಹಲವು ತಂಡಗಳು ರೆಡ್ ಬಾಲ್(Red Ball) ಕ್ರಿಕೆಟ್‌ಗಾಗಿ ಮೈದಾನಕ್ಕಿಳಿಯಲಿವೆ.
ವಿಶ್ವ ಕ್ರಿಕೆಟ್‌ನಲ್ಲಿ ಮುಂದಿನ 40 ದಿನಗಳಲ್ಲಿ ಒಟ್ಟು 12 ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಇದರೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಟೂರ್ನಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗುವ ಸಾಧ್ಯತೆ ಹೆಚ್ಚಿದೆ. ಮುಂದಿನ 40 ದಿನಗಳು ನಡೆಯುವ ಸತತ ಟೆಸ್ಟ್ ಪಂದ್ಯಗಳಲ್ಲಿ ಭಾರತ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಪಾಕಿಸ್ತಾನ, ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳು ಟೆಸ್ಟ್ ಸರಣಿಗಳನ್ನ ಆಡಲಿವೆ.
ಆಸ್ಟ್ರೇಲಿಯಾ v ವೆಸ್ಟ್ ಇಂಡೀಸ್
1ನೇ ಟೆಸ್ಟ್ – ನವೆಂಬರ್ 30ರಿಂದ ಡಿಸೆಂಬರ್ 4ರವರೆಗೆ
2ನೇ ಟೆಸ್ಟ್ – ಡಿಸೆಂಬರ್ 8ರಿಂದ ಡಿಸೆಂಬರ್ 12ರವರೆಗೆ
ಪಾಕಿಸ್ತಾನ v ಇಂಗ್ಲೆಂಡ್
1ನೇ ಟೆಸ್ಟ್ – ಡಿಸೆಂಬರ್ 1ರಿಂದ ಡಿಸೆಂಬರ್ 5ರವರೆಗೆ
2ನೇ ಟೆಸ್ಟ್ – ಡಿಸೆಂಬರ್ 9ರಿಂದ ಡಿಸೆಂಬರ್ 13ರವರೆಗೆ
3ನೇ ಟೆಸ್ಟ್ – ಡಿಸೆಂಬರ್ 17ರಿಂದ ಡಿಸೆಂಬರ್ 21ರವರೆಗೆ
ಬಾಂಗ್ಲಾದೇಶ v ಭಾರತ
1ನೇ ಟೆಸ್ಟ್ – ಡಿಸೆಂಬರ್ 14ರಿಂದ ಡಿಸೆಂಬರ್ ರವರೆಗೆ
2ನೇ ಟೆಸ್ಟ್ – ಡಿಸೆಂಬರ್ 22ರಿಂದ ಡಿಸೆಂಬರ್ 26ರವರೆಗೆ
ಆಸ್ಟ್ರೇಲಿಯಾ v ಸೌತ್ ಆಫ್ರಿಕಾ
1ನೇ ಟೆಸ್ಟ್ – ಡಿಸೆಂಬರ್ 17ರಿಂದ ಡಿಸೆಂಬರ್ 21ರವರೆಗೆ
2ನೇ ಟೆಸ್ಟ್ – ಡಿಸೆಂಬರ್ 26ರಿಂದ ಡಿಸೆಂಬರ್ 30ರವರೆಗೆ
ಪಾಕಿಸ್ತಾನ v ನ್ಯೂಜಿ಼ಲೆಂಡ್
1ನೇ ಟೆಸ್ಟ್ – ಡಿಸೆಂಬರ್ 27ರಿಂದ ಡಿಸೆಂಬರ್ 31ರವರೆಗೆ
2ನೇ ಟೆಸ್ಟ್ – ಜನವರಿ 4ರಿಂದ ಜನವರಿ 8ರವರೆಗೆ