ನಾಲ್ಕನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ಪಟಪಟನೆ ವಿಕೆಟ್ ಗಳನ್ನು ಕಂಡುಕೊಂಡಿತು ಜಯಂತ್ ಯಾದವ್ ನ್ಯೂಜಿಲೆಂಡ್ ಬ್ಯಾಟರ್ ಗಳನ್ನು ಬಿಟ್ಟು ಬಿಡದೆ ಕಾಡಿದರು. 4ನೇ ದಿನದ ಮೊದಲಿಗೆ ರಚಿನ್ ರವಿಂದ್ರ ಜಯಂತ್ ಯಾದವ್ ಎಸೆತದಲ್ಲಿ ಚೇತೇಶ್ವರ ಪೂಜಾರಗೆ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಕೈಲ್ ಜೇಮೀಸನ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಟಿಮ್ ಸೌಥಿ ಬಂದಷ್ಟೇ ವೇಗದಲ್ಲಿ ಪವೆಲಿಯನ್ ಸೇರಿಕೊಂಡರು. ವಿಲಿಯಂ ಸೋಮರ್ ವಿಲ್ಲೆ ಕೂಡ ತಂಡವನ್ನು ಕಾಪಾಡಲಿಲ್ಲ.
ಅಶ್ವಿನ್ ನಿಕೊಲಸ್ ವಿಕೆಟ್ ಹಾರಿಸುವ ಮೂಲಕ ಟೀಮ್ ಇಂಡಿಯಾಕ್ಕೆ 372 ರನ್ ಗಳ ಭರ್ಜರಿ ಜಯ ತಂದುಕೊಟ್ಟರು, ಅಶ್ವಿನ್ 4 ವಿಕೆಟ್ ಪಡೆದರೆ ಜಯಂತ್ ಯಾದವ್ ಕೂಡ 4ವಿಕೆಟ್ ಪಡೆದರು. ಈ ವಿಜಯದ ಮೂಲಕ ಟೀಮ್ ಇಂಡಿಯಾ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಯಿಂದ ಸರಣಿ ಗೆದ್ದು ಬೀಗಿತು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ ಮೇಲಕ್ಕೇರಿತು