Team India ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೋತ ಬೆನ್ನಲ್ಲೆ ಹಿರಿಯ
ಆಟಗಾರರ ಬದಲಾವಣೆ ಕೂಗು ಎದ್ದಿದ್ದು ಇದರ ನಡುವೆ ತಂಡದ ಕಚಿಂಗ್
ವಿಭಾಗಕ್ಕೂ ಸರ್ಜರಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮುಂದಿನ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಜುಲೈನಲ್ಲಿ ಆರಂಭವಾಗಲಿದ್ದು ಆ ಬಳಿಕ ತಂಡದ ಸಹಾಯಕ ಕೋಚ್ ಬದಲಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್, ಪರಸ್ ಮ್ಹಾಂಬ್ರೆಬೌಲಿಂಗ್, ವಿಕ್ರಮ್ ರಾಥೋಡ್ ಬೌಲಿಂಗ್ ಕೋಚ್ ಆಗಿದ್ದಾರೆ.
ವಿಕ್ರಂ ರಾಥೋಡ್ 2019ರಿಂದಲೂ ತಂಡದ ಜೊತೆಗಿದ್ದಾರೆ 2021ರಲ್ಲಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಮರು ಅಯ್ಕೆಯಾದರು.
ದ್ರಾವಿಡ್ ಹಾಗೂ ಮ್ಹಾಂಬ್ರೆ 2021ರ ಟಿ20 ವಿಶ್ವ ಕಪ್ ಬಳಿಕ ಕೋಚ್ ಆಗಿಕಾರ್ಯನಿರ್ವಹಿಸುತ್ತಿದ್ದಾರೆ.
ಕಳೆದ 2 ವರ್ಷಗಳಿಂದ ಭಾರತ ತಂಡ ಐಸಿಸಿ ಟ್ರೋಫಿ ಸೇರಿದಂತೆ ದೊಡ್ಡ ಸಾಧನೆ ಏನು ಮಾಡಿಲ್ಲ.
ಹೀಗಾಗಿ ವಿಕ್ರಮ್ ಮತ್ತು ಮ್ಹಾಂಬ್ರೆಅವರುಯಗಳನ್ನು ಸೆಪ್ಟಂಬರ್ನಲ್ಲಿ ನಡೆಯಲಿರುವ ಏಷ್ಯಾಕ್ ಗೂ ಮುನ್ನವೇ ಬದಲಾಯಿಸಬಹುದೆಂದು ತಿಳಿದು ಬಂದಿದೆ.ಏಷ್ಯಾಕಪ್ ಗೂ ಮುನ್ನವೇ ಹೊಸ ಸಹಾಯಕ ಸಿಬ್ಬಂದಿಗಳು ಹೊಂದಿಕೊಳ್ಳಲಿದ್ದಾರೆ.