team india- ನಾಯಕನಾಗಿ ಕೆ.ಎಲ್. ರಾಹುಲ್ ಫೇಲ್..?
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಮುಖಭಂಗ ಅನುಭವಿಸಿದೆ. ಏಕದಿನ ಸರಣಿಯಲ್ಲಿ ವೈಟ್ ವಾಶ್ ಮಾಡಿಕೊಂಡಿರುವ ಟೀಮ್ ಇಂಡಿಯಾ ಟೆಸ್ಟ್ ಸರಣಿಯನ್ನೂ ಸೋತಿದೆ.
ಮನೆಯೊಂದು ಮೂರು ಬಾಗಿಲು ಎಂಬಂತೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಪರಿಸ್ಥಿತಿಯಾಗಿತ್ತು. ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು ಒಂದು ಕಡೆಯಾದ್ರೆ, ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವಿನ ಮುಸುಕಿನ ಗುದ್ದಾಟ ಗುಟ್ಟಾಗಿ ಏನು ಉಳಿದಿರಲಿಲ್ಲ.
K.L Rahul Failed To Shine As Captain
ಹೀಗಾಗಿ ಸಹಜವಾಗಿ ಟೀಮ್ ಇಂಡಿಯಾದಲ್ಲಿ ಗೊಂದಲವನ್ನುಂಟು ಮಾಡಿತ್ತು. ಇನ್ನೊಂದೆಡೆ ಏಕದಿನ ನಾಯಕ ರೋಹಿತ್ ಶರ್ಮಾ ಗಾಯಗೊಂಡಿರುವುದು ಕೂಡ ತಂಡದ ಹಿನ್ನಡೆಗೆ ಕಾರಣವಾಗಿರಬಹುದು.
ಈ ನಡುವೆ, ಕೆ.ಎಲ್. ರಾಹುಲ್ ಗೆ ಅದೃಷ್ಟವೋ ಎಂಬಂತೆ ಟೀಮ್ ಇಂಡಿಯಾವನ್ನು ಮುನ್ನೆಡೆಸುವ ಜವಾಬ್ದಾರಿಯೂ ಸಿಕ್ಕಿತ್ತು. ವಿರಾಟ್ ಕೊಹ್ಲಿ ಗಾಯಗೊಂಡಿದ್ದ ಕಾರಣ ಟೆಸ್ಟ್ ಪಂದ್ಯವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು. ಆದ್ರೆ ರಾಹುಲ್ ನಾಯಕತ್ವ ತಂಡವನ್ನು ಸೋಲಿನಿಂದ ಬಚಾವ್ ಮಾಡಲು ಸಾಧ್ಯವಾಗಲಿಲ್ಲ.
ಬಳಿಕ ರೋಹಿತ್ ಅನುಪಸ್ಥಿತಿಯಲ್ಲಿ ಮತ್ತೆ ರಾಹುಲ್ ಗೆ ಏಕದಿನ ಸರಣಿಯನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು. ಆದ್ರೆ ಮೊದಲ ಪರೀಕ್ಷೆಯಲ್ಲೇ ಕೆ.ಎಲ್. ರಾಹುಲ್ ಸಂಪೂರ್ಣವಾಗಿ ಫೇಲ್ ಅದ್ರು. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ವಿಫಲರಾದ್ರು. ಹೀಗಾಗಿ ಮೂರು ಏಕದಿನ ಪಂದ್ಯಗಳನ್ನು ಟೀಮ್ ಇಂಡಿಯಾ ಕೈಚೆಲ್ಲಿಕೊಂಡಿತ್ತು.
ಒಟ್ಟಾರೆ ಕೆ,ಎಲ್. ರಾಹುಲ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒಂದು ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ರು. ಈ ನಾಲ್ಕು ಪಂದ್ಯಗಳ ಸೋಲು ಈಗ ರಾಹುಲ್ ಹೆಸರಿಗೆ ಅಂಟಿಕೊಂಡಿದೆ.
team india / k.l. rahul/ rahul dravid / southafrica odi crirket
ಈ ನಡುವೆ, ಕೆ.ಎಲ್. ರಾಹುಲ್ ಪರ ಕೋಚ್ ರಾಹುಲ್ ದ್ರಾವಿಡ್ ಬ್ಯಾಟಿಂಗ್ ವಹಿಸಿದ್ದಾರೆ. ನಾವು ಸ್ಮಾರ್ಟ್ ಕ್ರಿಕೆಟ್ ಆಡಲಿಲ್ಲ. ಆದ್ರೆ ರಾಹುಲ್ ತನ್ನ ಜವಾಬ್ದಾರಿಯನ್ನು ಉತ್ತಮವಾಗಿಯೇ ನಿಭಾಯಿಸಿದ್ದಾರೆ. ನಾಯಕನಾಗಿ ಮುಂದಿನ ದಿನಗಳಲ್ಲಿ ಪ್ರಬುದ್ಧತೆಯನ್ನು ಸಾಧಿಸಲಿದ್ದಾರೆ ಎಂಬ ವಿಶ್ವಾಸವನ್ನು ರಾಹುಲ್ ದ್ರಾವಿಡ್ ವ್ಯಕ್ತಪಡಿಸಿದ್ದಾರೆ.
ಆದ್ರೆ ಕೆ.ಎಲ್. ರಾಹುಲ್ ಅವರ ನಾಯಕತ್ವವನ್ನು ಸ್ವಲ್ಪ ಆತ್ಮಾವಲೋಕನ ಮಾಡಿದಾಗ ರಾಹುಲ್ ನಾಯಕನಾಗಿ ಅಷ್ಟೊಂದು ಯಶ ಸಾಧಿಸಿಲ್ಲ. ಈ ಹಿಂದೆ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ರಾಹುಲ್ ನಾಯಕನಾಗಿದ್ದರು. ಆದ್ರೆ ಆಟಗಾರನಾಗಿ ಯಶ ಸಾಧಿಸಿದ್ರೂ ನಾಯಕನಾಗಿ ಸಂಪೂರ್ಣವಾಗಿ ವಿಫಲರಾಗಿದ್ದರು. ಮುಂದಿನ ಐಪಿಎಲ್ ನಲ್ಲಿ ಲಕ್ನೋ ತಂಡಕ್ಕೆ ಕ್ಯಾಪ್ಟನ್ ಆಗಿ ನೇಮಕಗೊಂಡಿದ್ದಾರೆ.
ಒಟ್ಟಾರೆ ಹೇಳುವುದಾದ್ರೆ ನಾಯಕನಾಗಿ ರಾಹುಲ್ ಸಾಕಷ್ಟು ಕಲಿಯುವುದು ಇದೆ. ಸದ್ಯ ಬಿರುಕು ಬಿಟ್ಟಿರುವ ಟೀಮ್ ಇಂಡಿಯಾವನ್ನು ಸರಿಪಡಿಸಿಕೊಂಡು ಮುನ್ನಡೆಸಿಕೊಂಡು ಹೋಗುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಇಲ್ಲಿ ಚಾಣಕ್ಯನ ನೀತಿಯನ್ನು ಅನುಸರಿಸಬೇಕು.