ಟೀಮ್ ಇಂಡಿಯಾದಲ್ಲಿ ಕೊರೊನಾ ಕಾಟ ಬಿರುಗಾಳಿಯನ್ನೇ ಎಬ್ಬಿಸಿತ್ತು. ತಂಡಕ್ಕೆ ಆಯ್ಕೆಯಾದ ಪ್ರಮುಖ ಆಟಗಾರರು ಕೋವಿಡ್ ಸೋಂಕಿಗೆ ತುತ್ತಾಗಿದ್ದರಿಂದ ಆಡುವವರು ಯಾರು ಅನ್ನುವ ಪ್ರಶ್ನೆ ಎದಿತ್ತು. ಆದರೆ ಈಗ ಎಲ್ಲವೂ ಕ್ಲೀಯರ್ ಆಗಿದೆ. ಆಡುವ ಅಂತಿಮ 11 ರ ಬಳಗದ ಬಗ್ಗೆ ಚರ್ಚೆ ನಡೆಯುತ್ತಿದೆ.
ಹಿಟ್ಮ್ಯಾನ್ಗೆ ಜೋಡಿ ಯಾರು..?
ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಆದರೆ ಧವನ್ ಮತ್ತು ರುತುರಾಜ್ ಲಭ್ಯರಿಲ್ಲ. ರಾಹುಲ್ ಮೊದಲ ಏಕದಿನ ಪಂದ್ಯದಿಂದ ಬ್ರೇಕ್ ಪಡೆದಿದ್ದಾರೆ. ಹೀಗಾಗಿ ಮಯಾಂಕ್ ಅಥವಾ ಇಶನ್ ಕಿಶನ್ ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಬಹುದು.
ಮಧ್ಯಮ ಸರದಿಯಲ್ಲಿ ಅನನುಭವ
ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಅನುಭವದ ಕೊರತೆ ಕಾಡಲಿದೆ. ವಿರಾಟ್ ಕೊಹ್ಲಿಯನ್ನು ಬಿಟ್ಟರೆ, ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್ ಹೆಚ್ಚು ಏಕದಿನ ಪಂದ್ಯ ಆಡಿಲ್ಲ. ದೀಪಕ್ ಹೂಡ ಆಲ್ ರೌಂಡರ್ ಖೋಟಾದಲ್ಲಿ ಆಡಲಿದ್ದಾರೆ. ಇದು ಅವರಿಗೆ ಮೊದಲ ಪಂದ್ಯ.
ಕುಲ್ಚಾ ಜೋಡಿ ಕಂ ಬ್ಯಾಕ್..?
ಟೀಮ್ ಇಂಡಿಯಾದ ಎವರ್ಗ್ರೀನ್ ಸ್ಪಿನ್ ಜೋಡಿ ಕುಲ್ದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಕಣಕ್ಕಿಳಿಯುತ್ತಾರ ಎಂಬುದು ಕುತೂಹಲಕಾರಿಯಾಗಿದೆ. ಕುಲ್ಚಾ ಎಂದೇ ಇವರಿಬ್ಬರು ಫೇಮಸ್ ಆಗಿದ್ದರು.
ಮೊಹಮ್ಮದ್ ಸಿರಾಜ್ ಪ್ರಮುಖ ಬೌಲರ್ ಆಗಿ ಕಣಕ್ಕಿಳಿಯಲಿದ್ದಾರೆ. ಇವರಿಗೆ ಪ್ರಸಿದ್ಧ್ ಕೃಷ್ಣ ಸಾಥ್ ನೀಡಲಿದ್ದಾರೆ. ಆದರೆ, ದೀಪಕ್ ಚಹಾರ್ ಮತ್ತು ಶಾರ್ದೂಲ್ ಠಾಕೂರ್ ಪೈಕಿ ಯಾರಿಗೆ ಸ್ಥಾನ ಎಂಬುದು ಕುತೂಹಲ ಮೂಡಿಸಿದೆ.