ಟಿ20 ವಿಶ್ವಕಪ್ಗೆ (T20 World Cup) ಟೀಮ್ ಇಂಡಿಯಾ (Team India) ದೊಡ್ಡ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಏಷ್ಯಾಕಪ್ (Asia Cup) ಪ್ರದರ್ಶನ ಸಮಾಧಾನಕರವಾಗಿಲ್ಲದೇ ಇದ್ದರೂ ಚುಟುಕು ಮಹಾಸಮರದಲ್ಲಿ ಚಾಂಪಿಯನ್ ಆಗಬೇಕು ಎಂದು ಹಠಕ್ಕೆ ಬಿದ್ದಿದೆ. ಈ ಮಧ್ಯೆ ಟೀಮ್ ಇಂಡಿಯಾದ ಟ್ರಂಪ್ಕಾರ್ಡ್ ಬೌಲರ್ಗಳು ಫಿಟ್ನೆಸ್ ಟೆಸ್ಟ್ ಪಾಸಾಗಿದ್ದಾರೆ (Proves Fitness).
ಪ್ರೀಮಿಯರ್ ಫಾಸ್ಟ್ ಬೌಲರ್ ಜಸ್ಪ್ರಿತ್ ಬುಮ್ರಾ (Jaspreet Bumrah) ಬೆನ್ನು ಹುರಿ ನೋವಿನಿಂದ (Back Spasm) ಏಷ್ಯಕಪ್ ತಪ್ಪಿಸಿಕೊಂಡಿದ್ದರು. ಬುಮ್ರಾಗೆ ಆಗಿರುವ ಗಾಯದ ಬಗ್ಗೆ ಸಾಕಷ್ಟು ಭಯವಿತ್ತು. ವಿಶ್ವಕಪ್ ವೇಳೆ ಫಿಟ್ ಆಗ್ತಾರೋ ಇಲ್ವೋ ಅನ್ನುವ ಸಂದೇಹವಿತ್ತು. ಆದರೆ ಬೆಂಗಳೂರಿನ ನ್ಯಾಷನಲ್ ಅಕಾಡೆಮಿಯ (National Cricket Academy) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡು ಫಿಟ್ನೆಸ್ ಕಂಡುಕೊಂಡಿದ್ದಾರೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬಹುದೊಡ್ಡ ಗುಡ್ನ್ಯೂಸ್ ಆಗಿದೆ.
ಇನ್ನೊಂದೆಡೆ ಪಕ್ಕೆಲುಬು ಗಾಯದಿಂದ ಬಳಲುತ್ತಿರುವ ಹರ್ಷಲ್ ಪಟೇಲ್ (Harshal Patel) ಕೂಡ ಫಿಟ್ನೆಸ್ ಕಂಡುಕೊಂಡಿದ್ದಾರೆ. ಪಟೇಲ್ ವೆಸ್ಟ್ಇಂಡೀಸ್, ಇಂಗ್ಲೆಂಡ್ ಪ್ರವಾಸವನ್ನು ಮಿಸ್ ಮಾಡಿಕೊಂಡಿದ್ದರು. ಏಷ್ಯಾಕಪ್ನಲ್ಲೂ ಆಡಿರಲಿಲ್ಲ. ಪಟೇಲ್ ಕೂಡ ಎನ್ಸಿಎ ತರಬೇತಿ ಶಿಬಿರದಲ್ಲಿ ಭಾಗಿಯಾಗಿ ಫಿಟ್ ಆಗಿದ್ದಾರೆ. ಇವರು ಡೆತ್ ಓವರುಗಳ ಸ್ಪೆಷಲಿಸ್ಟ್ ಎಂದೇ ಹೆಸರು ಮಾಡಿದ್ದಾರೆ.
ಬುಮ್ರಾ ಮತ್ತು ಹರ್ಷಲ್ ಫಿಟ್ನೆಸ್ನಿಂದಾಗಿ ಭಾರತದ ಚಿಂತೆ ಕೊಂಚ ಕಡಿಮೆ ಆಗಿದೆ. ಟಿ20 ವಿಶ್ವಕಪ್ ತಂಡಕ್ಕೆ ಇವರ ಆಯ್ಕೆ ಬಹುತೇಕ ಖಚಿತವಾಗಿದೆ.