ಟಿ20 ವಿಶ್ವಕಪ್ಗೆ (T20 World Cup) ಟೀಮ್ ಇಂಡಿಯಾ (Team India) ಪ್ರಕಟವಾಗಿದೆ. ಏಷ್ಯಾಕಪ್ನಲ್ಲಿ (Asia Cup) ಆಡಿದ ತಂಡವೇ ಬಹುತೇಕ ಟಿ20 ವಿಶ್ವಕಪ್ನಲ್ಲಿ ಆಡುತ್ತಿದೆ. ಜಸ್ಪ್ರಿತ್ ಬುಮ್ರಾ (Jaspreet Bumrah) ಸೇರ್ಪಡೆಯಾಗಿದ್ದು, ರವೀಂದ್ರ ಜಡೇಜಾ (Ravindra Jadeja) ತಂಡದಿಂದ ಹೊರಗಿದ್ದಾರೆ. ಆದರೆ ಟೀಮ್ ಇಂಡಿಯಾದ ಆಯ್ಕೆ ಬಗ್ಗೆ ನೆಟ್ಟಿಗರು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹಲವು ಆಟಗಾರರ ಆಯ್ಕೆ ಯಾಕಾಗಿಲ್ಲ ಅನ್ನುವ ಪ್ರಶ್ನೆ ಮುಂದಿಟ್ಟಿದ್ದಾರೆ.
ಆಸ್ಟ್ರೇಲಿಯಾದ ಪಿಚ್ಗಳು ವೇಗದ ಬೌಲಿಂಗ್ಗೆ ಹೇಳಿ ಮಾಡಿಸಿದಂತಿದೆ. ಮೆಲ್ಬರ್ನ್, ಸಿಡ್ನಿ ಮತ್ತು ಪರ್ತ್ನಲ್ಲಂತೂ ಎಕ್ಸ್ಪ್ರೆಸ್ ವೇಗಿಗಳದ್ದೇ ಕಾರುಬಾರು ನಡೆಯಲಿದೆ. ಆದರೆ ಟೀಮ್ ಇಂಡಿಯಾದಲ್ಲಿ ಸೂಪರ್ ಫಾಸ್ಟ್ ವೇಗಿಗಳೇ ಇಲ್ಲ. ಜಸ್ಪ್ರಿತ್ ಬುಮ್ರಾ ಒಬ್ಬರು ವೇಗವಾಗಿ ಬೌಲಿಂಗ್ ಮಾಡಬಲ್ಲರಾದರೂ ಅವರು ಡೆತ್ ಓವರ್ಗಳಲ್ಲೇ ಬೌಲಿಂಗ್ ಮಾಡುತ್ತಾರೆ. ಇನ್ನು ಭುವನೇಶ್ವರ್ ಕುಮಾರ್ (Bhuvaneshwar Kumar) ಮತ್ತು ಅರ್ಶದೀಪ್ ಸಿಂಗ್ (ArshdeepSingh) ಸ್ವಿಂಗ್ ಅನ್ನೇ ಹೆಚ್ಚು ನಂಬಿಕೊಂಡಿದ್ದಾರೆ. ಆದರೆ ಆಸ್ಟ್ರೇಲಿಯನ್ ಪಿಚ್ಗಳು (Australian Pitch) ಸ್ವಿಂಗ್ಗೆ ನೆರವು ನೀಡುವುದಿಲ್ಲ. ಹೀಗಾಗಿ ಔಟ್ & ಔಟ್ ಫಾಸ್ಟ್ ಬೌಲರ್ ಯಾಕಿಲ್ಲ ಅನ್ನುವ ಪ್ರಶ್ನೆಯಿದೆ.
ಉಮ್ರನ್ ಮಲಿಕ್ (Umaran Malik) ಐಪಿಎಲ್ನಲ್ಲಿ (IPL) ತನ್ನ ವೇಗದ ಮೂಲಕವೇ ಸದ್ದು ಮಾಡಿದ್ದರು. ಐರ್ಲೆಂಡ್ ಪ್ರವಾಸದ ವೇಳೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ವಿಶ್ವಕಪ್ ತಂಡದಲ್ಲಿ ಅವರಿಗೆ ಸ್ಥಾನವಿಲ್ಲ. ಆಸ್ಟ್ರೇಲಿಯನ್ ಪಿಚ್ಗಳು ಉಮ್ರನ್ ವೇಗಕ್ಕೆ ನೆರವು ನೀಡುವ ಸಾಮರ್ಥ್ಯ ಹೊಂದಿದ್ದರೂ ಉಮ್ರನ್ ತಂಡದಲ್ಲಿಲ್ಲ. ಇನ್ನು ಮೊಹಮ್ಮದ್ ಶಮಿ (Mohammad Shami) ಸ್ಟ್ಯಾಂಡ್ ಬೈ ಆಟಗಾರನಾಗಿ ಮಾತ್ರ ಆಯ್ಕೆಯಾಗಿದ್ದಾರೆ.
ಬ್ಯಾಟಿಂಗ್ ವಿಭಾಗದಲ್ಲೂ ಪ್ರಶ್ನೆಗಳಿವೆ. ಸಂಜುಸ್ಯಾಮ್ಸನ್ (Sanju Samson)ಯಾಕಿಲ್ಲ ಅನ್ನುವುದಕ್ಕೆ ಉತ್ತರವಿಲ್ಲ. ರಿಷಬ್ ಪಂತ್ (Rishab Pant) ಬದಲು ಸಂಜು ಬೇಕಿತ್ತು ಅನ್ನುವವರೇ ಹೆಚ್ಚು. ಆಸ್ಟ್ರೇಲಿಯಾದ ದೊಡ್ಡ ಮೈದಾನಗಳನ್ನು ಕ್ಲೀಯರ್ ಮಾಡುವ ತಾಕತ್ತು ಸಂಜುಗಿದೆ. ಅದೇ ರೀತಿ ಲೆಫ್ಟ್-ರೈಟ್ ಕಾಂಬಿನೇಷನ್ಗಾಗಿ ಇಶನ್ ಕಿಶನ್ರನ್ನು (Ishan Kishan) ಕೂಡ ಆಯ್ಕೆ ಮಾಡಬಹುದಿತ್ತು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಟೀಮ್ ಇಂಡಿಯಾದಲ್ಲಿ ಹರ್ಷಲ್ ಪಟೇಲ್ (Harshal Patel) ಸ್ಥಾನವೂ ಪ್ರಶ್ನೆಯಾಗಿದೆ. ಯಾಕಂದರೆ ಹರ್ಷಲ್ ಆಸ್ಟ್ರೇಲಿಯಾದ ಪಿಚ್ನಲ್ಲಿ ಉಪಯೋಗಕ್ಕೆ ಬರುವುದಿಲ್ಲ ಅನ್ನುವುದು ವಾದವಾಗಿದೆ. ಒಟ್ಟಿನಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯುವ ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ಬೌಲರ್ಗಳೇ ದುಬಾರಿಯಾದರೂ ಅಚ್ಚರಿ ಇಲ್ಲ.