ಕಠಿಣ ಸವಾಲು ಎದುರಿಸಿದ ಸ್ವೀಟ್ಜರ್‍ಲೆಂಡ್ ತಂಡ ಕ್ಯಾಮರೂನ್ ವಿರುದ್ಧ 1-0 ಗೋಲಿನಿಂದ ಗೆದ್ದು ಶುಭಾರಂಭ ಮಾಡಿದೆ.
ಅಲ್ ಜನೌಬ್ ಮೈದಾನದಲ್ಲಿ ನಡೆದ ಪಂದ್ಯದ ಮೊದಲ ಅವಧಿಯಲ್ಲಿ ಕ್ಯಾಮರೂನ್ ತಂಡಕ್ಕೆ ಗೋಲು ಹೊಡೆಯುವ ಅವಕಾಶವಿತ್ತು.
ಆದರೆ ಸಾಧ್ಯವಾಗಲಿಲ್ಲ. ಮೊದಲಾರ್ಧದಲ್ಲಿ ಉಭಯ ತಂಡಗಳಿಂದ ಗೋಲು ದಾಖಲಾಗಲಿಲ್ಲ. 48ನೇ ನಿಮಿಷದಲ್ಲಿ ಸ್ವೀಟ್ಜರ್‍ಲೆಂಡ್ ತಂಡದ ಬ್ರೀಲ್ ಎಂಬ್ರೊಲೊ ಗೋಲು ಹೊಡೆದರು.
ಅಚ್ಚರಿಯ ವಿಷಯವೇನೆಂದರೆ ಬ್ರೀಲ್ ಎಂಬ್ರೊಲೊ ಮೂಲತಃ ಕ್ಯಾಮರೂನ್ ದೇಶದವರು.
ನಂತರ ಸ್ವೀಟ್ಜರ್‍ಲೆಂಡ್‍ಗೆ ಗೋಲು ಹೊಡೆಯುವ ಅವಕಾಶ ಇತ್ತು ಆದರೆ ಸಫಲವಾಗಲಿಲ್ಲ. ಸ್ವೀಟ್ಜರ್‍ಲೆಂಡ್ ಮೊದಲ ಪಂದ್ಯ ಗೆದ್ದಿದ್ದರೂ ಪ್ರದರ್ಶನದಲ್ಲಿ ಸಾಕಷ್ಟು ಸುಧಾರಿಸಬೇಕಿದೆ.