ಟೀಮ್ ಇಂಡಿಯಾದ ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್ ಅವರ ಬ್ಯಾಟಿಂಗ್ ನೋಡಿ ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟಿಗರು ಕೂಟ ಫಿಧಾ ಆಗಿದ್ದಾರೆ.
ಆಸ್ಟ್ರೇಲಿಯಾ ತಂಡದ ಹೊಡಿ ಬಡಿ ಆಟಗಾರ, ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಕೂಡ ಫಿದಾ ಆಗಿದ್ದಾರೆ.ಸೂರ್ಯ ಆಟದ ಮುಂದೆ ನಮ್ಮದು ಎನೂ ಅಲ್ಲ ಅರ್ಥದಲ್ಲಿ ಹೇಳಿದ್ದಾರೆ.
ಮೊ್ನನೆ ಸೂರ್ಯ ಶತಕ ಹೊಡೆದಿರೋದು ತಡವಾಗಿ ನೋಡಿದೆ. ಸ್ಕೋರ್ ಕಾರ್ಡ್ ಅನ್ನು ಫಿಂಚ್ಗೆ ಮೆಸೇಜ್ ಹಾಕಿದೆ.ಇವನೇನ್ ಹಿಂಗೆ ಆಡ್ತಿದ್ದಾನೆ ಅಂತ ಕೇಳಿದೆ. ಆಮೇಲೆ ಹೈಲೆಟ್ಸ್ ನೋಡಿದೆ. ಅವನ ಆಟ ನೋಡಿ ನನ್ನ ಆಟದ ಬಗ್ಗೆ ನನಗೆ ನಾಚಿಕೆ ಆಯ್ತು ಅಂತಾ ಗ್ಲೇನ್ ಮ್ಯಾಕ್ಸ್ ಹೇಳಿದ್ದಾರೆ.
ಉಳಿದವರು ರನ್ಗಾಗಿ ಒದ್ದಾಡಿದ್ರು.ಆದರೆ ಈತ 51 ಎಸೆತಕ್ಕೆ 111 ರನ್ ಚಚ್ಚಿದ್ದಾನೆ. ಸೂರ್ಯ ಸದ್ಯದ ಬ್ಯಾಟರ್ ಎಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೊನ್ನೆ ಎರಡನೆ ಟಿ20 ಪಂದ್ಯದ ನಂತರ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ ಸೂರ್ಯ ಕುರಿತು, ನಾನು ಇಂಥ ಹೊಡೆತಗಳನ್ನು ನೋಡಿಯೇ ಇಲ್ಲ ಎಂದಿದ್ದರು.