ಆಡಿದ ಎರಡೂ ಪಂದ್ಯಗಳಲ್ಲಿ ಸೋತಿರುವ ಸನ್ರೈಸರ್ಸ್ ಹೈದರಾಬಾದ್ ತಂಡವು ಭಾನುವಾರ ನಡೆಯುವ ಐಪಿಎಲ್ನಲ್ಲಿ ಇಂದು ಆತ್ಮವಿಶ್ವಾಸದಲ್ಲಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಶಿಖರ್ ಧವನ್ ನಾಯಕತ್ವದ ಪಂಜಾಬ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧದ ಜಯಿಸಿತ್ತು. ಏಡಿನ್ ಮರ್ಕರಂ ನೇತೃತ್ವದ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳ ವಿರುದ್ಧ ಸೋತಿತ್ತು.
ಸನ್ರೈಸರ್ಸ್ ತಂಡದ ಪ್ರಮುಖ ಬ್ಯಾಟರ್ಗಳಾದ ಮಯಾಂಕ್ ಅಗರವಾಲ್, ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್ ಹಾಗೂ ರಾಹುಲ್ ತ್ರಿಪಾಠಿ ಅವರು ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಆಡಿದರೆ ದೊಡ್ಡ ಮೊತ್ತ ಪೇರಿಸುವುದು ಸುಲಭವಾಗಲಿದೆ.
ಪಂಜಾಬ್ ತಂಡದ ಆರಂಭಿಕ ಜೋಡಿ ಶಿಖರ್ ಹಾಗೂ ಪ್ರಭುಸಿಮ್ರನ್ ಸಿಂಗ್ ಉತ್ತಮ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಇಬ್ಬರೂ ಅರ್ಧಶತಕ ಗಳಿಸಿದ್ದರು. ಆದರೆ, ರಾಜಪಕ್ಸ ಮತ್ತು ದೇಶಿ ಕ್ರಿಕೆಟ್ನ ಸ್ಪೋಟಕ ಶೈಲಿಯ ಬ್ಯಾಟರ್ ಶಾರೂಕ್ ಖಾನ್ ಅವರ ಅಸ್ಥಿರ ಲಯವು ತಂಡದ ಚಿಂತೆಗೆ ಕಾರಣವಾಗಿದೆ.
ಎಡಗೈ ವೇಗಿಗಳಾದ ಸ್ಯಾಮ್ ಕರನ್, ಆರ್ಷದೀಪ್ ಸಿಂಗ್ ಹಾಗೂ ಸ್ಪಿನ್ನರ್ ರಾಹುಲ್ ಚಾಹರ್ ಅವರ ಸವಾಲನ್ನು ಸನ್ರೈಸರ್ ಬ್ಯಾಟಿಂಗ್ ಪಡೆ ಮೀರಿ ನಿಲ್ಲಬೇಕಿದೆ.