ಮಾಜಿ ನಾಯಕ ದಿನೇಶ್ ಚಾಂಡಿಮ್ ಸಿಡಿಸಿದ ಅಜೇಯ 80 ರನ್ ಮತ್ತು ಓಪನರ್ ಓಶಾಡೋ ಫೆರ್ನಾಂಡೋ ಗಳಿಸಿದ ಅರ್ಧಶತಕದ ಹೊರತಾಗಿಯೂ ಪಾಕ್ ಬೌಲರ್ಗಳು (Pakistan) ಶ್ರೀಲಂಕಾ (Srilanka) ತಂಡವನ್ನು ಕಟ್ಟಿ ಹಾಕಿದರು. ಗಾಲೆಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನ ಮೊದಲ ದಿನದ ಗೌರವ ಎರಡೂ ತಂಡಗಳ ಪಾಲಾಗಿದೆ.
ಮಾಜಿ ನಾಯಕ ಆ್ಯಂಜಲೋ ಮ್ಯಾಥ್ಯೂಸ್ ಅವರ 100ನೇ ಟೆಸ್ಟ್ನಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿತು. ಓಶಾಡೋ ಫೆರ್ನಾಂಡೊ ಮತ್ತು ನಾಯಕ ಧಿಂಉತ್ ಕರುಣರತ್ನೆ 92 ರನ್ಗಳ ಭರ್ಜರಿ ಆರಂಭ ತಂದುಕೊಟ್ಟರು. ಆದರೆ ಓಶಾಡೋ 50 ರನ್ಗಳಿಸಿ ಔಟಾದರು. ಕುಸಾಲ್ ಮೆಂಡಿಸ್ 3 ರನ್ಗಿಸಿದ್ದಾಗ ರನೌಟ್ ಬಲೆಯಲ್ಲಿ ಬಿದ್ದರು. ಈ ಮಧ್ಯೆ ನಾಯಕ ಕರುಣ ರತ್ನೆ ಕೂಡ 40 ರನ್ಗಳಿಸಿದ್ದಾಗ ಎಡವಿದರು.
ಆ್ಯಂಜಲೋ ಮ್ಯಾಥ್ಯೂಸ್ ಮತ್ತು ದಿನೇಶ್ ಚಾಂಡಿಮಲ್ ತಂಡವನ್ನು ಆಧರಿಸಿದರು. 4ನೇ ವಿಕೆಟ್ಗೆ 75 ರನ್ಗಳ ಜೊತೆಯಾಟವನ್ನು ತಂದುಕೊಟ್ಟರು. ಆದರೆ ಶತಕದ ಟೆಸ್ಟ್ನಲ್ಲಿ ಮ್ಯಾಥ್ಯೂಸ್ 42 ರನ್ಗಳಿಸಿ ಔಟಾದರು. ಅದ್ಭುತ ಫಾರ್ಮ್ನಲ್ಲಿರುವ ಚಾಂಡಿಮಲ್ ಧನಂಜಯ ಡಿ ಸಿಲ್ವಾ ಜೊತೆ 5ನೇ ವಿಕೆಟ್ಗೆ 63 ರನ್ಗಳ ಜೊತೆಯಾಟ ಆಡಿದರು. ಆದರೆ ಚಾಂಡಿಮಲ್ 80 ರನ್ಗಳಿಸಿದ್ದಾಗ ಎಡವಿ ನಿರಾಸೆ ಅನುಭವಿಸಿದರು.
ದಿನದ ಕೊನೆಯಲ್ಲಿ ಧನಂಜಯ ಡಿ ಸಿಲ್ವಾ ಮತ್ತು ನಿರೋಶನ್ ಡಿಕ್ವೆಲ್ಲಾ ತಂಡವನ್ನು ಆಧರಿಸುವ ಸೂಚನೆ ನೀಡಿದರು. ಆದರೆ ನಸೀಮ್ ಶಾ 33 ರನ್ಗಳಿಸಿದ್ದ ಧನಂಜಯ ವಿಕೆಟ್ ಹಾರಿಸಿದರು. ಡಿಕ್ವೆಲ್ಲಾ ವೇಗವಾಗಿ ರನ್ಗಳಿಸಿದರು. ಮೊದಲ ದಿನದ ಅಂತ್ಯಕ್ಕೆ ಶ್ರೀಲಂಕಾ 6 ವಿಕೆಟ್ ಕಳೆದುಕೊಂಡು 315 ರನ್ಗಳಿಸಿದೆ. 43 ಎಸೆತಗಳಲ್ಲಿ 42 ರನ್ಗಳಿಸಿರುವ ಡಿಕ್ವೆಲ್ಲಾ ಮತ್ತು 6 ರನ್ಗಳಿಸಿರುವ ದುನಿತ್ ವಲಲಗೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.