ಎಬಿಡಿ ವಿಲಿಯರ್ಸ್ .. ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್ ಮೆನ್ .. ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಸೂಪರ್ ಹೀರೋ.. ಇವರನ್ನು ಕ್ರಿಕೆಟ್ ಜಗತ್ತಿನಲ್ಲಿ 360 ಡಿಗ್ರಿ ಪ್ಲೇಯರ್ ಅಂತ ಕರೆಯಲಾಗುತ್ತಿದೆ.
ಹಾಗೇ ಟೀಮ್ ಇಂಡಿಯಾದಲ್ಲಿ 360 ಡಿಗ್ರಿ ಪ್ಲೇಯರ್ ಯಾರು ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಹೌದು, ಟೀಮ್ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ಅವರು ಟೀಮ್ ಇಂಡಿಯಾದ 360 ಡಿಗ್ರಿ ಯಾರು ಅನ್ನೋದನ್ನು ಹೇಳಿದ್ದಾರೆ.
ಇರ್ಫಾನ್ ಪಠಾಣ್ ಅವರ ಪ್ರಕಾರ ಸೂರ್ಯಕುಮಾರ್ ಯಾದವ್ ಅವರು ಟೀಮ್ ಇಂಡಿಯಾದ 360 ಡಿಗ್ರಿ ಪ್ಲೇಯರ್ ಅಂತ ಬಣ್ಣನೆ ಮಾಡಿದ್ದಾರೆ.
ಟಿ-20 ವಿಶ್ವಕಪ್ ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡದಿದ್ರೂ ಇದೀಗ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಸಿಡಿಲಬ್ಬದರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅಮೋಘ 62 ದಾಖಲಿಸುವ ಮೂಲಕ ಟೀಮ್ ಇಂಡಿಯಾದ ಗೆಲುವಿನ ರೂವಾರಿ ಕೂಡ ಆಗಿದ್ರು.
2022ರ ಟಿ-20 ವಿಶ್ವಕಪ್ ನಲ್ಲಿ ಸೂರ್ಯಕುಮಾರ್ ಅವರು ಭಾರತದ ಬ್ಯಾಟಿಂಗ್ ಬೆನ್ನಲುಬಾಗಲಿದ್ದಾರೆ. ಸೂರ್ಯ ಕುಮಾರ್ ಯಾದವ್ ಅವರು ಈಗಾಗಲೇ ಭರವಸೆ ಮೂಡಿಸಿದ್ದಾರೆ. ಭಾರತದ 360 ಡಿಗ್ರಿ ಪ್ಲೇಯರ್ ಯಾರು ಅನ್ನೋ ಪ್ರಶ್ನೆಗೆ ನನ್ನ ಉತ್ತರ ಸೂರ್ಯ ಕುಮಾರ್ ಯಾದವ್ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಸೂರ್ಯ ಕುಮಾರ್ ಎಲ್ಲಾ ಡೈರಕ್ಷನ್ ಗಳಲ್ಲಿ ಆಡುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ. ವೇಗದ ಬೌಲಿಂಗ್ ಮತ್ತು ಸ್ಪಿನ್ ಎಸೆತಗಳ ಎದುರು ಉತ್ತಮವಾಗಿ ಆಡುವ ಸಾಮಥ್ರ್ಯವನ್ನು ಹೊಂದಿದ್ದಾರೆ. ಜೊತೆಗೆ ವಿಕೆಟ್ ನ ಮೌಲ್ಯ ಏನು ಎಂಬುದು ಅವರಿಗೆ ಗೊತ್ತಿದೆ. ಲೆಕ್ಕಚಾರ ಹಾಕೊಂಡು ಬ್ಯಾಟಿಂಗ್ ಮಾಡುವ ವಿಶ್ವಾಸ ಅವರಲ್ಲಿದೆ. ಅವಕಾಶಕ್ಕಾಗಿ ತಾಳ್ಮೆಯಿಂದ ಕಾಯುವ ಗುಣವು ಇದೆ. ಸಂದರ್ಭಕ್ಕೆ ತಕ್ಕಂತೆ ಆಡುವ ಛಾತಿಯನ್ನು ಹೊಂದಿದ್ದಾರೆ. ಅಗತ್ಯ ಸಮಯದಲ್ಲಿ ಜೊತೆಯಾಟವನ್ನು ಆಡುವ ಬುದ್ಧಿವಂತಿಕೆಯೂ ಅವರಲ್ಲಿದೆ ಎಂದು ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.
ಒಟ್ಟಿನಲ್ಲಿ ಟಿ-20 ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾದ ಮೂರನೇ ಕ್ರಮಾಂಕವನ್ನು ಭದ್ರಪಡಿಸುವತ್ತ ಸೂರ್ಯ ಕುಮಾರ್ ಯಾದವ್ ಹೆಜ್ಜೆನ್ನಿಟ್ಟಿದ್ದಾರೆ.