ಆರನೇ ಬಾರಿಗೆ Nervous Nighties ಬಲಿಯಾದ Shikhar Dhawan
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ODI ಸರಣಿಯ ಮೊದಲ ಪಂದ್ಯದಲ್ಲಿ (IND vs WI), ಶಿಖರ್ ಧವನ್ ಕೇವಲ 3 ರನ್‌ಗಳಿಂದ ತಮ್ಮ ಶತಕವನ್ನು ತಪ್ಪಿಸಿಕೊಂಡರು. 97 ರನ್ ಗಳಿಸಿ ಅವರು ಔಟಾದರು. ಇದು ಆರನೇ ಬಾರಿ ಅವರು nervous nighties ಬಲಿಯಾದರು. ಅಲ್ಲದೆ ಶತಕ ವಂಚಿತರಾಗಿದ್ದರೂ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಬರೆದರು.

ಧವನ್ ಭಾರತದ ಪರ ಏಕದಿನದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಹಿರಿಯ ನಾಯಕರಾದರು. ಶಿಖರ್ ಅವರು 36 ವರ್ಷ 229 ದಿನಗಳ ವಯಸ್ಸಿನಲ್ಲಿ ನಾಯಕನಾಗಿ ಭಾರತಕ್ಕಾಗಿ ODIಗಳಲ್ಲಿ ಅರ್ಧಶತಕ ಗಳಿಸಿದರು. ಇದಕ್ಕೂ ಮುನ್ನ ಮೊಹಮ್ಮದ್ ಅಜರುದ್ದೀನ್ ಹೆಸರಿನಲ್ಲಿ ಈ ದಾಖಲೆ ಇವರ ಹೆಸರಿನಲ್ಲಿತ್ತು. ಅಜರುದ್ದೀನ್ 36 ವರ್ಷ ಮತ್ತು 120 ದಿನಗಳ ವಯಸ್ಸಿನಲ್ಲಿ ಭಾರತದ ನಾಯಕನಾಗಿ ODIಗಳಲ್ಲಿ ಅರ್ಧಶತಕ ಬಾರಿಸಿದ್ದರು. ಅಜರುದ್ದೀನ್ ನಂತರ ಸುನಿಲ್ ಗವಾಸ್ಕರ್ (35 ವರ್ಷ 225 ದಿನಗಳು), ಎಂಎಸ್ ಧೋನಿ (35 ವರ್ಷ 208 ದಿನಗಳು) ಮತ್ತು ರೋಹಿತ್ ಶರ್ಮಾ (35 ವರ್ಷ 73 ದಿನಗಳು) ಹೆಸರುಗಳು ಈ ಪಟ್ಟಿಯಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಶಿಖರ್ 90+ ರನ್ ಗಳಿಸಿ ಆರನೇ ಬಾರಿಗೆ ಶತಕ ವಂಚಿತರಾದರು. ಅವರು ODIಗಳಲ್ಲಿ 90ರ ಗಡಿಯಲ್ಲಿ ಔಟ್ ಆದ ಆಟಗಾರರಾಗಿದ್ದಾರೆ. ಸಚಿನ್ ತೆಂಡೂಲ್ಕರ್ (18) ನಂಬರ್ ಒನ್ ಮತ್ತು ಮೊಹಮ್ಮದ್ ಅಜರುದ್ದೀನ್ (7) ಎರಡನೇ ಸ್ಥಾನದಲ್ಲಿದ್ದಾರೆ.

ಶಿಖರ್ ಧವನ್ ಕೊನೆಯ ಬಾರಿಗೆ 2019 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಶತಕ ಬಾರಿಸಿದ್ದರು. ಇದರ ನಂತರ, ಅವರು ಮೂರು ಬಾರಿ ಶತಕದ ಸಮೀಪ ತಲುಪಿದರು ಆದರೆ ಮೂರಂಕಿ ದಾಟಿರಲಿಲ್ಲ. ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ 3 ರನ್‌ಗಳಿಂದ ಶತಕ ವಂಚಿತರಾದ ಶಿಖರ್, 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ರಾಜ್‌ಕೋಟ್ ಏಕದಿನ ಪಂದ್ಯದಲ್ಲಿ 96 ಮತ್ತು ಕಳೆದ ವರ್ಷ ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ 98 ರನ್ ಗಳಿಸಿ ಔಟಾದರು.