ವೆಸ್ಟ್ ಇಂಡೀಸ್(West Indies) ವಿರುದ್ಧದ ODI ಸರಣಿಯಲ್ಲಿ ಭಾರತ(India) ತಂಡವನ್ನ ಮುನ್ನಡೆಸಲು ಸಜ್ಜಾಗಿರುವ ಟೀಂ ಇಂಡಿಯಾದ ʼಗಬ್ಬರ್ʼ ಶಿಖರ್ ಧವನ್(Shikar Dhawan), ಕೆರೆಬಿಯನ್ನರ ವಿರುದ್ಧ ODI ಸರಣಿಯಲ್ಲಿ ಹೊಸದೊಂದು ಮೈಲುಗಲ್ಲು(New Milestone) ಸೃಷ್ಟಿಸಲು ಸಜ್ಜಾಗಿದ್ದಾರೆ.
ಭಾರತ ತಂಡದ ನಾಯಕ ಪೂರ್ಣ ಪ್ರಮಾಣದ ಕ್ಯಾಪ್ಟನ್ ರೋಹಿತ್ ಶರ್ಮ, ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅನುಪಸ್ಥಿತಿಯಲ್ಲಿ ಶಿಖರ್ ಧವನ್ಗೆ ತಂಡವನ್ನ ಮುನ್ನಡೆಸುವ ಅವಕಾಶ ನೀಡಲಾಗಿದೆ. ಹೀಗಾಗಿ ವಿಂಡೀಸ್ ಸರಣಿಗೆ ಸಜ್ಜಾಗಿರುವ ಧವನ್, ODI ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತದ ಪರ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.
ಕೆರೆಬಿಯನ್ ಅಂಗಳದಲ್ಲಿ ಈವರೆಗೂ 14 ಏಕದಿನ ಪಂದ್ಯ ಆಡಿರುವ ಶಿಖರ್ ಧವನ್, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡುವ ಮೂಲಕ 15 ಪಂದ್ಯಗಳನ್ನು ಆಡಿದ ಸಾಧನೆ ಹೊಂದಿರುವ ವಿರಾಟ್ ಕೊಹ್ಲಿ ದಾಖಲೆ ಹಿಂದಿಕ್ಕಲಿದ್ದಾರೆ. ವೆಸ್ಟ್ ಇಂಡೀಸ್ ಅಂಗಳದಲ್ಲಿ 14 ಪಂದ್ಯವನ್ನು ಆಡಿರುವ ಶಿಖರ್ ಧವನ್, 26.76ರ ಸರಾಸರಿಯಲ್ಲಿ ಎರಡು ಶತಕದ ಸಹಿತ 348 ರನ್ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ನೆಲದಲ್ಲಿ ಹೆಚ್ಚು ರನ್ಗಳಿಸಿರುವ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಧವನ್, ಈ ಲಿಸ್ಟ್ನಲ್ಲಿ ಬಡ್ತಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ವೆಸ್ಟ್ ಇಂಡೀಸ್ನಲ್ಲಿ ODI ಪಂದ್ಯದಲ್ಲಿ ಹೆಚ್ಚು ರನ್ಗಳಿಸಿರುವ ಭಾರತದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ 790 ರನ್ಗಳಿಸಿರುವ ವಿರಾಟ್ ಕೊಹ್ಲಿ, 1ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರ ಈ ಸಾಧನೆಯಲ್ಲಿ 4 ಶತಕಗಳು ಕೂಡಿವೆ. ಹೀಗಾಗಿ ಶಿಖರ್ ಧವನ್ ಅವರಿಗೆ ರೋಹಿತ್ ಶರ್ಮ, ಯುವರಾಜ್ ಸಿಂಗ್ ಹಾಗೂ ಎಂ.ಎಸ್. ಧೋನಿಯ ಸಾಧನೆಯನ್ನು ಮುರಿದು 2ನೇ ಸ್ಥಾನಕ್ಕೆ ಏರಿಯುವ ಅವಕಾಶ ಹೊಂದಿದ್ದಾರೆ.
ಭಾರತದ ಹೆಚ್ಚು ರನ್ಗಳು- ವೆಸ್ಟ್ ಇಂಡೀಸ್ನಲ್ಲಿ
ವಿರಾಟ್ ಕೊಹ್ಲಿ – 790 ರನ್, 15 ಪಂದ್ಯಗಳು
ಎಂ.ಎಸ್.ಧೋನಿ – 458 ರನ್, 14 ಪಂದ್ಯಗಳು
ಯುವರಾಜ್ ಸಿಂಗ್ – 419 ರನ್, 14 ಪಂದ್ಯಗಳು
ರೋಹಿತ್ ಶರ್ಮ – 408 ರನ್, 14 ಪಂದ್ಯಗಳು
ಶಿಖರ್ ಧವನ್ – 348 ರನ್, 14 ಪಂದ್ಯಗಳು