ಭಾರತ ಪುರುಷರ ಫುಟ್ಬಾಲ್ ತಂಡ ಇಂದು ಸ್ಯಾಫ್ ಚಾಂಪಿಯನ್ಶಿಪ್ನ ಸೆಮಿಫೈನಲ್ ಪಂದ್ಯದಲ್ಲಿ ಇಂದು ಲೆಬನಾನ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಕಂಠಿರವ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಚೆಟ್ರಿಪಡೆ ಬಲಿಷ್ಠ ಲೆಬನಾನ್ ವಿರುದ್ಧ ಕಠಿಣ ಸವಾಲು ಎದುರಿಸಲಿದೆ. ಎ ಗುಂಪಿನಲ್ಲಿ ಭಾರತ ಎರಡನೆ ಸ್ಥಾನದೊಂದಿಗೆ ಲೀಗ್ ಹಂತವನ್ನು ಮುಗಿಸಿತ್ತು.
ಇತ್ತೀಚೆಗಷ್ಟೆ ಉಭಯ ತಂಡಗಳು ಇಂಟರ್ ಕಾಂಟಿನೆಂಟಲ್ ಕಪ್ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಭಾರತ ತಂಡ ಚಾಂಪಿಯನ್ನಾಗಿ ಹೊರಹೊಮ್ಮಿತ್ತು.
ಮೊನ್ನೆ ಕುವೈತ್ ವಿರುದ್ಧದ ಪಂದ್ಯದಲ್ಲಿ ಕೊನೆ ಕ್ಷಣದಲ್ಲಿ ಯಡವಟ್ಟು ಮಾಡಿಕೊಂಡು 1-1 ಗೋಲುನಿಂದ ಡ್ರಾ ಮಾಡಿಕೊಂಡಿತ್ತು.ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧ 4-೦, ನೇಪಾಳ ವಿರುದ್ಧ 3-೦ ಗೋಲುಗಳಿಂದ ಗೆದ್ದಿತ್ತು.
ಭಾರತ ಮತ್ತು ಲೆಬನಾನ್ ತಂಡಗಳು ರೋಚಕ ಪೈಪೋಟಿ ನೀಡುತ್ತಾ ಬಂದಿದೆ. ಎರಡೂ ತಂಡಗಳು ನಿರ್ಣಾಯಕ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ. ಲೆಬನಾನ್ ತಂಡ ಈ ಹಿಂದೆ ಭಾರತ ವಿರುದ್ಧ ಗೆದ್ದಿದೆ. ಮೊನ್ನೆ ಇಂಟರ್ಕಾಂನೆಂಟಲ್ ಕಪ್ ಫೈನಲ್ನಲ್ಲಿ ಸೋತಿತ್ತು. ಇದೀಗ ಸೇಡವನ್ನು ತೀರಿಸಿಕೊಳ್ಳಲು ಲೆಬನಾನ್ ತಂಡ ಹೋರಾಡಲಿದೆ.
ಬಿ ಗುಂಪಿನ ಪಂದ್ಯದಲ್ಲಿ ಮಾಲ್ಡೀವ್ಸ್ ವಿರುದ್ಧ ೧-೦ ಗೋಲಿನಿಂದ ಗೆದ್ದು ೯ ಅಂಕ ಪಡೆದಿತ್ತುಘಿ. ಇದಕ್ಕೂ ಮುನ್ನ ಬಾಂಗ್ಲಾದೇಶ (೨-೦) ಮತ್ತು ಬೂತಾನ್ (೪-೧) ವಿರುದ್ಧ ಗೆದ್ದಿತ್ತು.
ಭಾರತ ಮತ್ತು ಲೆಬನಾನ್ ತಂಡ ಇದುವರೆಗೂ ೮ ಬಾರಿ ಮುಖಾಮುಖಿಯಾಗಿದೆ. ಭಾರತ ಎರಡು ಬಾರಿ ಗೆದ್ದರೆ , ಲೆಬನಾನ್ ತಂಡ ೩ ಬಾರಿ ಗೆದ್ದಿದೆ. ೩ ಬಾರಿ ಡ್ರಾನಲ್ಲಿ ಅಂತ್ಯ ಕಂಡಿದೆ.
ಭಾರತ ತಂಡದಲ್ಲಿ ಸಾಹಾಲ್ ಅಬ್ದುಲ್ ಸಾಮಾದ್, ಮಹೇಶ್ ಸಿಂಗ್ ಮತ್ತು ಉದಾಂತಾ ಸಿಂಗ್ ನಾಯಕನನ್ನು ಬೆಂಬಲಿಸಬೇಕಿದೆ. ಉದಾಂತಾ ಮತ್ತು ಮಹೇಶ್
ಭಾರತ ಇಂದಿನ ಪಂದ್ಯದಲ್ಲಿ ಸುನಿಲ್ ಚೆಟ್ರಿ ಮೇಲೆ ಅವಲಂಭಿಸಬಾರದು. ಚೆಟ್ರಿ ಲೆಬನಾನ್ ವಿರುದ್ಧ ಅಮೋಘ ಪ್ರದರ್ಶನ ನೀಡಬೇಕಿದೆ. ಈ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ಮೂರು ಪಂದ್ಯಗಳಿAದ9 ಗೋಲು ಹೊಡೆದಿದ್ದಾರೆ. ಇಂದಿನ ಮಹತ್ವದ ಪಂದ್ಯದಲ್ಲೂ ಇದೇ ಪ್ರದರ್ಶನವನ್ನು ನಿರೀಕ್ಷಿಸಲಾಗಿದೆ.