ಭಾರತದ ತಾರಾ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಡೇವಿಸ್ ಕಪ್ ವೃತ್ತಿಜೀವನವನ್ನು ಮುಂಬರುವ ಸೆಪ್ಟೆಂಬರ್ನಲ್ಲಿ ಅಂತ್ಯಗೊಳಿಸುವುದಾಗಿ ತಿಳಿಸಿದ್ದಾರೆ. ಕನ್ನಡಿಗ ರೋಹನ್ ಬೋಪಣ್ಣ ತಮ್ಮ ಕೊನೆಯ ಪಂದ್ಯವನ್ನು ತವರು ಬೆಂಗಳೂರಿನಲ್ಲಿ ಆಡಬೇಕೆಂಬ ಇಚ್ಛೆ ಹೊಂದಿದ್ದರು. ಆದರೆ ಆಲ್ ಇಂಡಿಯಾ ಟೆನಿಸ್ ಅಸೋಸಿಯೇಷನ್ ಪಂದ್ಯವನ್ನು ಉತ್ತರ ಪ್ರದೇಶದಲ್ಲಿ ನಿಗದಿ ಮಾಡಿದೆ.
ಸೆಪೆಂಬರ್ನಲ್ಲಿ ತಿಂಗಳಿನಲ್ಲಿ ನಡೆಯಲಿರುವ ಡೇವಿಸ್ ಕಪ್ ಟೂರ್ನಿಯಲ್ಲಿ ಭಾರತ ಮೊರಾಕ್ಕೊ ತಂಡವನ್ನು ಎದುರಿಸಲಿದೆ.
43 ವರ್ಷದ ರೋಹನ್ ಬೋಪಣ್ಣ 2002ರಲ್ಲಿ ಡೇವಿಸ್ ಕಪ್ಗೆ ಪದಾರ್ಪಣೆ ಮಾಡಿದ್ದರು. ಈಗಲೂ ಅದ್ಭುತವಾಗಿ ಟೆನಿಸ್ ಆಡುತ್ತಾ ಬಂದಿದ್ದಾರೆ. ಈವರೆಗೂ 32 ಟೈ ಪಂದ್ಯಗಳನ್ನು ಆಡಿದ್ದಾರೆ.
ಸೆಪ್ಟೆಂಬರ್ನಲ್ಲಿ ನನ್ನ ವೃತ್ತಿ ಜೀವನದ ಕೊನೆಯ ಡೇವಿಸ್ ಕಪ್ ಆಡಲಿದ್ದೇನೆ ಎಂದು ಬೋಪಣ್ಣ ಲಂಡನ್ನಲ್ಲಿ ಮಾಹಿತಿ ನೀಡಿದ್ದಾರೆ.
ನಾನು 2002ರಿಂದ ಭಾರತ ತಂಡದಲ್ಲಿದ್ದೇನೆ. ನನ್ನ ತವರಿನಲ್ಲಿ ಕೊನೆಯ ಪಂದ್ಯ ಆಡಬೇಕೆಂಬ ಆಸೆ ಇದೆ. ನಾನು ಈ ವಿಚಾರವನ್ನು ತಂಡದವರೊಂದಿಗೂ ಹೇಳಿಕೊಂಡಿದ್ದೇನೆ.ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಟೆನಿಸ್ ಫೆಡರೇಶನ್ ಕೂಡ ಸಂತೋಷದಿಂದ ಒಪ್ಪಿಕೊಂಡಿದೆ. ಇದು ಫೆಡರೇಶನ್ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ನಾನು ಕಳೆದ 20 ವರ್ಷಗಳಿಂದ ಆಡ್ತುತಾ ಬಂದಿದ್ದೇನೆ. ನಾಯಕನ ಜತೆ ಮಾತನಾಡುತ್ತೇನೆ.ನನನ ಕೊನೆಯ ಪಂದ್ಯವನ್ನು ನೋಡಲು ಎಲ್ಲರಿಗೂ ಸಿಗುತ್ತದೆ. 43ನೇ ವರ್ಷದಲ್ಲೂ ಟೆನಿಸ್ ಆಡುತ್ತಿರುವುದು ಬೋನಸ್ ಎಂದಿದ್ದಾರೆ.
ಆಲ್ ಇಂಡಿಯಾ ಟೆನಿಸ್ ಅಸೋಸಿಯೇಷನ್ (ಎಐಟಿಎ) ಪಂದ್ಯವನ್ನು ಬೆಂಗಳೂರಿಗೆ ವರ್ಗಾಹಿಸಲು ಸಾಧ್ಯವಿಲ್ಲ ಸ್ಪಷ್ಟನೆ ನೀಡಿದೆ.
ರೋಹನ್ ಬೋಪಣ್ಣ ಭಾರತದ ಪರ 58 ಟೂರ್ನಿಗಳನ್ನು ಪ್ರತಿನಿಸಿದ್ದಾರೆ. ಕೈದೀಪ್ ಮುಖರ್ಜಿ (43), ರಾಮನಾಥನ್ ಕೃಷ್ಣ್ (43), ಪ್ರೇಮ್ಜಿತ್ ಲಾಲ್941), ಆನಂ ಅಮೃತರಾಜ್ (39), ಮಹೇಶ್ ಭೂಪತಿ(35), ವಿಜಯ್ ಅಮೃತರಾಜ್( 32) ಜೊತೆ ಆಡಿದ್ದಾರೆ.