ಡೇವಿಸ್ ಕಪ್ ವಿಶ್ವ ಗ್ರುಪ್ ಒಂದರ ಪ್ಲೇ ಆಫ್ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ 3-೦ ರ ಮುನ್ನಡೆಯೊಂದಿಗೆ 2022 ರಲ್ಲಿ ಗ್ರುಪ್ ಒಂದರಲ್ಲಿ ಉಳಿಯಲಿದೆ.
ನವದೆಹಲಿಯ ಜಿಮಖಾನಾ ಅಂಕಣದಲ್ಲಿ ಶನಿವಾರ ನಡೆದ ಡಬಲ್ಸ್ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿ ಗೆಲುವಿನ ನಗೆ ಬೀರುವ ಮೂಲಕ ಭಾರತವನ್ನು ಡೇವಿಸ್ ಕಪ್ ವಿಶ್ವ ಗುಂಪು ಒಂದರಲ್ಲಿ ಉಳಿಯುವಂತೆ ಮಾಡಿದರು.
ಶುಕ್ರವಾರ ನಡೆದ ಮೊದಲೆರಡು ಸಿಂಗಲ್ಸ್ಗಳಲ್ಲಿ ರಾಮ್ಕುಮಾರ್ ರಾಮನಾಥನ್ ಹಾಗೂ ಯೂಕಿ ಭಾಂಬ್ರಾ ಗೆಲುವು ದಾಖಲಿಸಿ ಭಾರತಕ್ಕೆ 2-0 ರ ಮುನ್ನಡೆ ನೀಡಿದ್ದರು.
ಶನಿವಾರ ನಡೆದ ಡಬಲ್ಸ್ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿ, ಡೆನ್ಮಾರ್ಕ್ನ ಫ್ರೆಡೆರಿಕ್ ನೀಲ್ಸನ್ ಹಾಗೂ ಜೋಹಾನ್ಸ್ ಇಂಜಿಲ್ಡಸೆನ್ ಜೋಡಿ “ರುದ್ಧ ಮೂರು ಸೆಟ್ಗಳ ಹೋರಾಟದಲ್ಲಿ 6-7, 6-4, 7-4 (4) ರಿಂದ ಸೋಲಿಸಿತು.
ಮೊದಲ ಸೆಟ್ನಲ್ಲಿ ಉಭಯ ಜೋಡಿಗಳು ಸಮಬಲ ಹೋರಾಟ ನಡೆಸಿದ್ದರಿಂದ ಪ್ರತಿ ಅಂಕಕ್ಕೂ ತೀವ್ರ ಪೈಪೋಟಿ ನಡೆತು. ಟೈಬ್ರೇಕರ್ ವರೆಗೆ ಬೆಳೆದ ಸೆಟ್ನ್ನು ಅಂತಿಮವಾಗಿ ಡೆನ್ಮಾರ್ಕ್ ಜೋಡಿ ಗೆದ್ದಿತು.
ಎರಡನೇ ಸೆಟ್ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಜೋಡಿ, ಆರಂಭದಲ್ಲಿ ಎದುರಾಳಿಂದ ತಕ್ಕಮಟ್ಟಿನ ಪ್ರತಿರೋಧ ಎದುರಿಸಿದರೂ ಅಂತಿಮವಾಗಿ ಸೆಟ್ನ್ನು 6-4 ರಿಂದ ಜಯಿಸಿದರು. ನಿರ್ಣಾಯಕ ಎನಿಸಿದ್ದ ಮೂರನೇ ಹಾಗೂ ಅಂತಿಮ ಸೆಟ್ನಲ್ಲಿ ಕೂಡ ಜಿದ್ದಾಜಿದ್ದನ ಹೋರಾಟ ನಡೆತು. ಟೈಬ್ರೇಕರ್ ವರೆಗೂ ಬೆಳೆದ ಸೆಟ್ನ್ನು ಅಂತಿಮವಾಗಿ 7-6 ರಿಂದ ಭಾರತದ ಜೋಡಿ ಜಯಿಸಿತು.