ಅಗ್ರ ಶ್ರೇಯಾಂಕಿತ ಆಟಗಾರ ರಫೆಲ್ ನಡಾಲ್, ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಭಾನುವಾರ ರಾತ್ರಿ ನಡೆದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐದನೇ ಶ್ರೇಯಾಂಕದ ಆಟಗಾರ ರಫೆಲ್ ನಡಾಲ್ 3-6, 6-3, 6-2, 3-6, 6-3 ರಿಂದ ಕೆನಡಾದ ಫೆಲಿಕ್ಸ್ ಆಗರ್ ಅಲಿಯಾಸ್ಸಿಮ್ ಅವರನ್ನು ಐದು ಸೆಟ್‌ಗಳ ತೀವ್ರ ಸೆಣಸಾಟದಲ್ಲಿ ಸೋಲಿಸಿ ಎಂಟರ ಹಂತ ಕಂಡರು.
ಮೊದಲ ಸೆಟ್‌ನಲ್ಲಿ ಉತ್ತಮ ಪ್ರದರ್ಶಮ ತೋರಿದ ಒಂಬತ್ತನೇ ಶ್ರೇಯಾಂಕದ ಆಟಗಾರ ಕೆನಡಾದ ಫೆಲಿಕ್ಸ್, ಸೆಟ್‌ನ್ನು 6-3 ರಿಂದ ಜಯಿಸಿ 1-0 ರ ಮುನ್ನಡೆ ಸಾಧಿಸಿ ನಡಾಲ್‌ಗೆ ಆಘಾತ ನೀಡಿದರು. ಆದರೆ ಎರಡನೇ ಸೆಟ್‌ನಲ್ಲಿ ತಿರುಗೇಟು ನಡಾಲ್ ಸೆಟ್‌ನ್ನು 6-3 ರಿಂದ ಗೆದ್ದು ಪಂದ್ಯವನ್ನು 1-1 ರಿಂದ ಸಮಸ್ಥಿತಿಗೆ ತಂದು ಮೂರನೇ ಸೆಟ್ ಹೋರಾಟಕ್ಕೆ ಸಜ್ಜಾದರು.
ಮೂರನೇ ಸೆಟ್‌ನಲ್ಲಿ ಕೂಡ ಮೇಲುಗೈ ಸಾಧಿಸಿದ ನಡಾಲ್, ಸೆಟ್‌ನ್ನು ಹೆಚ್ಚಿನ ಪರಿಶ್ರಮವಿಲ್ಲದೇ 6-2 ರಿಂದ ತಮ್ಮದಾಗಿಸಿಕೊಂಡು ಮುನ್ನಡೆಯನ್ನು 2-1 ಕ್ಕೆ ಹೆಚ್ಚಿಸಿಕೊಂಡರು. ಆದರೆ ನಾಲ್ಕನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಅಲಿಯಾಸ್ಸಿಮ್, ಸೆಟ್‌ನ್ನು 6-3 ರಿಂದ ಜಯಿಸಿ ಪಂದ್ಯವನ್ನು 2-2 ರಿಂದ ಸಮಸ್ಥಿತಿಗೆ ತಂದು ಅಂತಿಮ ಹೋರಾಟಕ್ಕೆ ಸಜ್ಜಾದರು.
ನಿರ್ಣಾಯಕ ಎನಿಸಿದ್ದ ಐದನೇ ಹಾಗೂ ಕೊನೆ ಸೆಟ್‌ನಲ್ಲಿ ಆರಂಭದಿAದಲೇ ಮೇಲುಗೈ ಸಾಧಿಸಿದ ರಫೆಲ್ ನಡಾಲ್, ಸೆಟ್‌ನ್ನು 6-3 ರಿಂದ ಗೆದ್ದು ಕ್ವಾರ್ಟರ್ ಫೈನಲ್ ಹಂತ ತಲುಪಿದರು.
ಸೋಮವಾರ ನಡೆದ ಹದಿನಾರರ ಹಂತದ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಸ್ಪೇನ್ ಆಟಗಾರ ಕಾರ್ಲೋಸ್ ಅಲ್ಕರಾಜ್ ಗಾರ್ಫಿಯಾ 6-1, 6-4, 6-4 ರಿಂದ 21 ನೇ ಶ್ರೇಯಾಂಕದ ರಷ್ಯಾದ ಕರೆನ್ ಖಚನೋವ್ ಅವರನ್ನು ಮೂರು ನೇರ ಸೆಟ್‌ಗಳ ಆಟದಲ್ಲಿ ಸೋಲಿಸಿ ಎಂಟರ ಹಂತ ಕಂಡರು.
ಇನ್ನೊಂದು ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ನಾರ್ವೆಯ ಕ್ಯಾಸ್ಟರ್ ರೂಡ್, 12 ನೇ ಶ್ರೇಯಾಂಕದ ಪೋಲೆಂಡ್‌ನ ಹಬರ್ಟ್ ಹರ್ಕಾಜ್ ಅವರನ್ನು 6-2, 6-3, 3-6, 6-3 ರಿಂದ ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಸೋಲಿಸಿದರು.
ಮಹಿಳಾ ವಿಭಾಗದ ಸಿಂಗಲ್ಸ್ ಹದಿನಾರರ ಹಂತದ ಪಂದ್ಯದಲ್ಲಿ 29 ನೇ ಶ್ರೇಯಾಂಕದ ಆಟಗಾರ್ತಿ ವೆರೋನಿಕಾ ಕುಡೆರ್ಮೆಟೋವಾ, 22 ನೇ ಶ್ರೇಯಾಂಕದ ಆಟಗಾರ್ತಿ ಅಮೆರಿಕೆಯ ಮ್ಯಾಡಿಸನ್ ಕೀಸ್ ಅವರನ್ನು ಮೂರು ಸೆಟ್‌ಗಳ ಹೋರಾಟದಲ್ಲಿ 1-6, 6-3, 6-1 ರಿಂದ ಸೋಲಿಸಿ ಎಂಟರ ಹಂತ ಕಂಡರು.