ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ (Australia Womens Cricketer) ತಂಡ ಉಪನಾಯಕಿ (Vice Captain) ರಾಚೆಲ್ ಹೇಯ್ನ್ಸ್ (Rachael Haynes) ಅಂತರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದಾರೆ. ಈ ಬಾರಿಯ ವುಮನ್ಸ್ ಬಿಗ್ ಬ್ಯಾಶ್ ಲೀಗ್ (WBBL) ಬಳಿಕ ಯಾವುದೇ ವೃತ್ತಿಪರ ಕ್ರಿಕೆಟ್ ಆಡುವುದಿಲ್ಲ ಎಂದು ಘೋಷಿಸಿದ್ದಾರೆ (Announced Retirement). ಸಿಡ್ನಿ ಥಂಡರ್ (Sydney Thunder) ತಂಡದಲ್ಲಿ ರಾಚೆಲ್ ಕೊನೆಯ ಬಾರಿಗೆ ಮೈದಾನಕ್ಕಿಳಿಯಲಿದ್ದಾರೆ.
ಎಡಗೈ ಟಾಪ್ ಆರ್ಡರ್ ಬ್ಯಾಟರ್ ಆಗಿದ್ದ ರಾಚೆಲ್ ಇಂಗ್ಲೆಂಡ್ ವಿರುದ್ಧ 2009ರಲ್ಲಿ ಟೆಸ್ಟ್ (Test) ಹಾಗೂ ಏಕದಿನ (ODI) ಪಂದ್ಯಗಳಿಗೆ ಕಾಲಿಟ್ಟಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 3818 ರನ್ಗಳನ್ನು ರಾಚೆಲ್ಗಳಿಸಿದ್ದರು ಈ ಪೈಕಿ ಏಕದಿನ ಪಂದ್ಯದಲ್ಲಿ 2 ಶತಕ ಸಹಿತಿ 2584 ರನ್ ಬಾರಿಸಿದ್ದರು.
ಮೆಗ್ಲ್ಯಾನಿಂಗ್ (Meg Lanning) ಅನುಪಸ್ಥಿತಿಯಲ್ಲಿ ರಾಚೆಲ್ 14 ಬಾರಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ರಾಚೆಲ್ ಓಪನರ್ ಆಗಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರೆ, ಟಿ20ಗಳಲ್ಲಿ ಮಿಡಲ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಕಳೆದ ವಿಶ್ವಕಪ್ನಲ್ಲಿ ರಾಚೆಲ್ ಅಲಿಸಾ ಹೀಲಿ ಬಳಿಕ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದರು. ಏಕದಿನ ಹಾಗೂ ಟಿ20 ವಿಶ್ವಕಪ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡದ ಸದಸ್ಯೆ ಕೂಡ ಆಗಿದ್ದರು.
ರಾಚೆಲ್ ನಿವೃತ್ತಿ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಸೇರಿದಂತೆ ಕ್ರಿಕೆಟ್ ದಂತಕಥೆಗಳು ಅಚ್ಚರಿ ಸೂಚಿಸಿದರೂ ಉತ್ತಮ ಭವಿಷ್ಯವಿರಲಿ ಎಂದು ಹಾರೈಸಿದ್ದಾರೆ.