ರೈಡರ್ ನರೇಂದರ್ ಅವರ ಅಮೋಘ ರೈಡಿಂಗ್ ನೆರವಿನಿಂದ ತಮಿಳ್ ತಲೈವಾಸ್ ಬೆಂಗಾಲ್ ವಾರಿಯರ್ಸ್ ವಿರುದ್ಧ 35-30ಅಂಗಳಿಂದ ರೋಚಕ ಗೆಲುವು ದಾಖಲಿಸಿತು.
ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದ ಮೊದಲಾರ್ಧದಲ್ಲಿ ತಮಿಳ್ ತಂಡ 21-13 ಅಂಕಗಳಿಂದ ಮುನ್ನಡೆ ಪಡೆಯಿತು.
ತಲೈವಾಸ್ ಪರ ರೈಡರ್‍ಗಳಾದ ನರೇಂದರ್ 13 ಅಂಕ, ಅಜಿಂಕ್ಯ ಪವಾರ್ 7 ಅಂಕ, ಡಿಫೆಂಡರ್ ಸಾಗರ್ 5 ಅಂಕ ಪಡೆದರು. ಬೆಂಗಾಲ್ ಪರ ಮಣಿಂದರ್ ಸಿಂಗ್ 15 ಅಂಕ ತಂದಕೊಟ್ಟರು.
ಮತ್ತೊಂದು ಪಂದ್ಯದಲ್ಲಿ ಯುಪಿ ಯೋಧಾಸ್ ಗುಜರಾತ್ ಜೈಂಟ್ಸ್ 35-31 ಅಂಕಗಳಿಂದ ಗೆದ್ದುಕೊಂಡಿತು.
ಯೋಧಾಸ್ ಪರ ರೈಡರ್‍ಗಳಾದ ರೋಹಿತ್ ತೋಮರ್ 10 ಅಂಕ, ನಾಯಕ ಪ್ರದೀಪ್ ನರ್ವಾಲ್ 9 ಅಂಕ ಪಡೆದರು. ಜೈಂಟ್ಸ್ ಪರ ಪ್ರತೀಕ್ 10, ಚಂದ್ರನ್ 7 ಅಂಕ ತಂದುಕೊಟ್ಟರು.