ಭಾರತದ ಪ್ರತಿಭಾವಂತ ಬ್ಯಾಡ್ಮಿಂಟನ್ ಪಟು ಎಚ್.ಎಸ್.ಪ್ರಣಯ್ ಇಂಡೋನೇಷ್ಯಾ ಓಪನ್ 2022 ಬ್ಯಾಡ್ಮಿಂಟನ್ ಸೂಪರ್ 1000 ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಝಾವೋ ಜುನ್ ಪೆಂಗ್ ವಿರುದ್ಧ ಭಾರತದ ಎಚ್.ಎಸ್.ಪ್ರಣಯ್ ಸೋಲು ಕೊಂಡರು. ಚೀನಾದ ಆಟಗಾರ 21-16, 21-15 ರಿಂದ ಎರಡು ನೇರ ಗೇಮ್‌ಗಳ ಭಾರತದ ಆಟಗಾರನನ್ನು ಸೋಲಿಸಿ ಅಂತಿಮ ಹಂತ ತಲುಪಿದರು.

ಮೊದಲ ಗೇಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಚೀನಾದ ಝಾವೋ ಜುನ್ ಪೆಂಗ್, ಭಾರತದ ಎಚ್.ಎಸ್.ಪ್ರಣಯ್ ಅವರನ್ನು 21-16 ರಿಂದ ಸೋಲಿಸಿ 1-0 ರ ಮುನ್ನಡೆಯೊಂದಿಗೆ ಎರಡನೇ ಗೇಮ್ ಆಡಲು ಸಜ್ಜಾದರು. ಎರಡನೇ ಗೇಮ್‌ನಲ್ಲಿ ಆರಂಭದಿಂದಲೇ ಮೇಲುಗೈ ಸಾಧಿಸಿದ ಝಾವೋ ಜುನ್ ಪೆಂಗ್, ಭಾರತದ ಭರವಸೆಯ ಆಟಗಾರ ಎಚ್.ಎಸ್.ಪ್ರಣಯ್ ಅವರನ್ನು 21-15 ರಿಂದ ಸೋಲಿಸಿ ಫೈನಲ್ ಹಂತ ಕಂಡರು.
ಇದಕ್ಕೂ ಮೊದಲು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಚ್.ಎಸ್.ಪ್ರಣಯ್, ಡೆನ್ಮಾರ್ಕ್ ರಾಸ್ಮಸ್ ಜೆಮ್ಕೆ ಅವರನ್ನು ಸೋಲಿಸಿ ಸೆಮಿಫೈನಲ್ ಹಂತ ಕಂಡಿದ್ದರು.