ಆತಿಥೇಯ ಬಾಂಗ್ಲಾದೇಶ ಹಾಗೂ ಪ್ರವಾಸಿ ಪಾಕಿಸ್ತಾನ ತಂಡಗಳ ನಡುವೆ ಢಾಕಾದ ಶೇರ್ ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂನಲ್ಲಿ ಆರಂಭವಾದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.
ಮಳೆಯ ಕಾರಣ ಚಹ ವಿರಾಮದ ನಂತರದ ಆಟವನ್ನು ರದ್ದುಪಡಿಸಲಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಪಂದ್ಯ ಸ್ಥಗಿತಗೊಂಡಾಗ ಪಾಕಿಸ್ತಾನ ತನ್ನ ಪ್ರಥಮ ಇನ್ನಿಂಗ್ಸ್ನಲ್ಲಿ ಎರಡು ವಿಕೆಟ್ ಕಳೆದುಕೊಂಡು 161 ರನ್ ಮಾಡಿತ್ತು.
ಮೊದಲ ದಿನದಾಟದ ಕೊನೆಯಲ್ಲಿ ಅಜರ್ ಅಲಿ 39 ಹಾಗೂ ನಾಯಕ ಬಾಬರ್ ಅಜಮ್ 60 ರನ್ ಬಾರಿಸಿದ್ದಾರೆ. ಇವರು 99 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸೇರಿದ್ದು ಅಜೇಯರಾಗುಳಿದಿದ್ದಾರೆ.
ಪಾಕಿಸ್ತಾನದ ಇನ್ನಿಂಗ್ಸ್ ಆರಂಭಿಸಿದ ಅಬಿದ್ ಅಲಿ ಹಾಗೂ ಅಬದುಲ್ಲಾ, ಆತ್ಮವಿಶ್ವಾಸದಿಂದಲೇ ಬ್ಯಾಟ್ ಮಾಡಿ ರನ್ ಸೇರಿಸುತ್ತ ಸಾಗಿದೆ.
ಮೊದಲ ವಿಕೆಟ್ ಜೊತೆಯಾಟದಲ್ಲಿ ಅಬಿದ್ ಅಲಿ (39) ಹಾಗೂ ಅಬದುಲ್ಲಾ (25) ಜೋಡಿ 59 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅಬದುಲ್ಲಾ ತೈಜುಲ್ ಇಸ್ಲಾಮ್ ಬೌಲಿಂಗ್ನಲ್ಲಿ ಕ್ಲೀನ್ ಬೋಲ್ಡ್ ಆದರು.
ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ ಅಜರ್ ಅಲಿ ಹಾಗೂ ನಾಯಕ ಬಾಬರ್ ಅಜಮ್ 91 ರನ್ ಸೇರಿಸಿ ತಂಡವನ್ನು ಬಲಪಡಿಸಿದರು.