ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಪ್ರಿಯಾನ್ಶು ರಾಜವಾತ್ ಆರ್ಲಿಯಾನ್ಸ್ ಮಾಸ್ಟರ್ಸ್ ಟೂರ್ನಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಚೊಚ್ಚಲ ಬಿಡಬ್ಲ್ಯುಎಫ್ ಪ್ರಶಸ್ತಿ ಗೆದ್ದಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಪೈನಲ್ ಪಂದ್ಯದಲ್ಲಿ ಪ್ರಿಯಾನ್ಶು ರಾಜವಾತ್ ಡೆನ್ಮಾರ್ಕ್ನ ಜೊನ್ನಾಸೆನ್ ವಿರುದ್ಧ 21-15, 19-21, 21-16 ಅಂಕಗಳಿಂದ ರೋಚಕ ಗೆಲುವು ದಾಖಲಿಸಿದರು. ಪ್ರಿಯಾನ್ಶು ರಾಜವಾತ್ಗೆ ಇದು ವೃತ್ತಿ ಜೀವನದ ಶ್ರೇಷ್ಠ ಪ್ರಶಸ್ತಿಯಾಗಿದೆ.
ಈ ಇಬ್ಬರು ಆಟಗಾರರು ಅರ್ಹತಾ ಸುತ್ತಿನ ಮೂಲಕ ಟೂರ್ನಿ ಪ್ರವೇಶಿಸಿದ್ದರು. ಭಾರತೀಯ ಆಟಗಾರ ಪ್ರಿಯಾನ್ಶು ಅತ್ಯುತ್ತಮ ಪ್ರದರ್ಶನ ಮೂಲಕ ಗೆದ್ದರು.