ಅತಿಥೇಯ ನ್ಯೂಜಿ಼ಲೆಂಡ್(New Zealand) ಹಾಗೂ ಭಾರತ(India) ವಿರುದ್ಧದ ಟಿ20 ಸರಣಿ ಮುಕ್ತಾಯಗೊಂಡ ಬೆನ್ನಲ್ಲೇ ಉಭಯ ತಂಡಗಳ ನಡುವಿನ ODI ಸರಣಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಳೆ(ನ.25) ಆಕ್ಲೆಂಡ್‌ನಲ್ಲಿ ನಡೆಯಲಿದೆ. ಎರಡು ತಂಡಗಳ ನಡುವಿನ ಟಿ20 ಸರಣಿಯ ಎರಡು ಪಂದ್ಯಗಳು ಮಳೆಯ ಕಾರಣದಿಂದ ರದ್ದಾದರೆ, ಸರಣಿಯ ದ್ವಿತೀಯ ಪಂದ್ಯವನ್ನ ಗೆದ್ದು 1-0 ಮುನ್ನಡೆ ಮೂಲಕ ಸರಣಿ ತನ್ನದಾಗಿಸಿಕೊಂಡಿರುವ ಭಾರತ ಇದೇ ಉತ್ಸಾಹದೊಂದಿಗೆ ಏಕದಿನ ಸರಣಿ ಆರಂಭಿಸುವ ನಿರೀಕ್ಷೆಯಲ್ಲಿದೆ. ಆದರೆ T20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವು ಕಾಣದ ನ್ಯೂಜಿ಼ಲೆಂಡ್ ಏಕದಿನ ಸರಣಿಯಲ್ಲಿ ಬಲಿಷ್ಠ ಕಮ್ ಬ್ಯಾಕ್ ಮಾಡುವ ತವಕದಲ್ಲಿದೆ.
ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಭಾರತ, ODIನಲ್ಲಿ ಶಿಖರ್ ಧವನ್ ಸಾರಥ್ಯದಲ್ಲಿ ಆಡಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಉತ್ತಮ ಲಯ ಕಂಡುಕೊಂಡಿದ್ದಾರೆ. ಆದರೆ ಟಿ20 ಸರಣಿಯಲ್ಲಿದ್ದ ಕೆಲವು ಆಟಗಾರರು ಏಕದಿನ ಸರಣಿಯಿಂದ ಹೊರಗುಳಿದಿದ್ದು, ಹೊಸ ತಂತ್ರದೊಂದಿಗೆ ಟೀಂ ಇಂಡಿಯಾ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ಅಲ್ಲದೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂದ ಇಲವೆನ್ ಯಾವ ರೀತಿ ಇರಲಿದೆ ಎಂಬ ಕುತೂಹಲ ಮನೆ ಮಾಡಿದೆ.
ಮತ್ತೊಂದೆಡೆ T20 ಸರಣಿಯಲ್ಲಿ ನಿರಾಸಾದಾಯಕ ಪ್ರದರ್ಶನ ನೀಡಿರುವ ನ್ಯೂಜಿ಼ಲೆಂಡ್ ಕೂಡ ಹೊಸ ಹುರುಪಿನೊಂದಿಗೆ ಆಡಲಿದ್ದು, ಕಿವೀಸ್ ತಂಡದಲ್ಲೂ ಸಹ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ. ಹೀಗಾಗಿ ನ್ಯೂಜಿ಼ಲೆಂಡ್ ತಂಡದ ಪ್ಲೇಯಿಂಗ್ ಇಲವೆನ್ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ನ್ಯೂಜಿ಼ಲೆಂಡ್ ತವರಿನಲ್ಲಿ ಆಡಿರುವ 4 ODI ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಸರಣಿ ತಮ್ಮದಾಗಿಸಿಕೊಂಡಿದೆ. ಉಭಯ ತಂಡಗಳ ಈವರೆಗಿನ ಮುಖಾಮುಖಿ ಗಮನಿಸಿದರೆ ಆಡಿರುವ 110 ಪಂದ್ಯಗಳಲ್ಲಿ ನ್ಯೂಜಿ಼ಲೆಂಡ್ 49 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ. ಭಾರತ 55 ಪಂದ್ಯಗಳಲ್ಲಿ ಗೆಲುವಿನ ನಗೆಬೀರಿದ್ದು, 1 ಪಂದ್ಯ ಟೈ ಆಗಿದ್ದರೆ. 5 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.
ಉಭಯ ತಂಡಗಳು:
ಭಾರತ ತಂಡ: ಶಿಖರ್ ಧವನ್(ನಾಯಕ), ಶುಭ್ಮನ್ ಗಿಲ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಸಂಜೂ ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಥಾಕೂರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅರ್ಶದೀಪ್ ಸಿಂಗ್, ದೀಪಕ್ ಚಹರ್, ಉಮ್ರಾನ್ ಮಲ್ಲಿಕ್.
ನ್ಯೂಜಿ಼ಲೆಂಡ್ ತಂಡ:
ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್(ನಾಯಕ), ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ಡ್ಯಾರಿಲ್ ಮಿಚೆಲ್, ಮೈಕಲ್ ಬ್ರೇಸ್‌ವೆಲ್, ಜಿಮ್ಮಿ ನೀಶಮ್, ಮಿಚೆಲ್ ಸ್ಯಾಂಟ್ನರ್, ಲಾಕ್ಕಿ ಫೆರ್ಗುಸನ್, ಟಿಮ್ ಸೌಥಿ, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್.