ವಿಶ್ವದ ನಂ.1 ಆಟಗಾರ ನವೋಕ್ ಜೋಕೊವಿಕ್ ತಮ್ಮ ಮೊಣಕೈ ಮೂಳೆ ಫಿಟ್ ಆಗಿಲ್ಲ ಎಂದು ಹೇಳಿದ್ದಾರೆ.
ಮುಂದಿನ ತಿಂಗಳು ಪ್ರತಿಷ್ಠಿತ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ ನಡೆಯಲಿದೆ. ಸದ್ಯ ಬಾಂಜ ಲೂಕಾದಲ್ಲಿ ನಡೆಯುತ್ತಿರುವ ಎಟಿಪಿ 250 ಟೂರ್ನಿಯಲ್ಲಿ ಎದುರಿಸುತ್ತಿರುವ ಮೊಣಕೈ ಸಮಸ್ಯೆ ಕುರಿತು ಹೇಳಿಕೊಂಡಿದ್ದಾರೆ.
ಏಪ್ರಿಲ್ನಲ್ಲಿ ನೊವೊಕ್ ಜೊಕೊವಿಕ್ ಮೊಂಟೆ ಕಾರ್ಲೊ ಮಾಸ್ಟರ್ಸ್ನಲ್ಲಿ ಲೊರೆನ್ಜೊ ಮುಸೆಟ್ಟಿ ವಿರುದ್ಧ ಮೂರನೆ ಸುತ್ತಿನಲ್ಲಿ ಸೋತಿದ್ದರು.
ನನ್ನ ಮೊಣ ಕೈ ಒಳ್ಳೆಯ ರೂಪದಲ್ಲಿಲ್ಲ. ಮೊದಲಪಂದ್ಯ ಆಡಲು ಸಿದ್ಧನಿಲ್ಲ ಎಂದಿದ್ದರು.
ಮೊಂಟೆ ಕಾರ್ಲೊ ಫಲಿತಾಂಶದಿಂದ ಸಂತೃಪ್ತನಾಗಿದ್ದೇನೆ. ಒಂದು ಹೊಸ ಅವಕಾಶದಿಂದ ಪ್ರತಿ ವಾರ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವಕಾಶವಿದೆ ಎಂದಿದ್ದಾರೆ.
ಬಾಂಜ ಲೂಕಾ ಟೂರ್ನಿಯ ಎರಡನೆ ಸುತ್ತಿನಲ್ಲಿ ಲೂಕಾ ವಾನ್ ಆಸ್ಸಕೆ ಅವರನ್ನು ಜೋಕೊವಿಕ್ ಎದುರಿಸಲಿದ್ದಾರೆ,. ವಾವ್ರಿಂಕಾ ಅವರನ್ನು ಲೂಕಾ ವಾನ್ ಆಸ್ಸಕೆ 1-6, 7-6 (4), 6-4 ಅಂಕಗಳಿಂದ ಮಣಿಸಿದರು.