ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಸೆಪ್ಟೆಂಬರ್ ತಿಂಗಳ ಆಟಗಾರ ಪ್ರಶಸ್ತಿಗೆ ಮೂವರ ಹೆಸರನ್ನು ನಾಮನಿರ್ದೇಶನ ಮಾಡಿದೆ. ಪುರುಷರ ವಿಭಾಗದಲ್ಲಿ ಕ್ಯಾಮರೂನ್ ಗ್ರೀನ್ (ಆಸ್ಟ್ರೇಲಿಯಾ), ಅಕ್ಸರ್ ಪಟೇಲ್ (ಭಾರತ) ಹಾಗೂ ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) ಅವರನ್ನು ನಾಮನಿರ್ದೇಶಿತರಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಹರ್ಮನ್ಪ್ರೀತ್ ಕೌರ್ (ಭಾರತ), ಸ್ಮೃತಿ ಮಂಧಾನ (ಭಾರತ), ನಿಗರ್ ಸುಲ್ತಾನಾ (ಬಾಂಗ್ಲಾದೇಶ) ಹೆಸರು ಪ್ರಕಟಿಸಲಾಗಿದೆ.
ICC T20 ನಂ.1 ಬ್ಯಾಟರ್ ಆಗಿರುವ ರಿಜ್ವಾನ್ Mohammad Rizwan, ಕಳೆದ ತಿಂಗಳು ಆಡಿದ 10 ಪಂದ್ಯಗಳಲ್ಲಿ ರಿಜ್ವಾನ್ ಏಳು ಅರ್ಧಶತಕಗಳನ್ನು ಗಳಿಸಿದ್ದಾರೆ. ಏಷ್ಯಾ ಕಪ್ನಲ್ಲಿ ಹಾಂಗ್ ಕಾಂಗ್ ಮತ್ತು ಭಾರತದ ವಿರುದ್ಧ 70ಕ್ಕೂ ಹೆಚ್ಚು ರನ್ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧದ ಏಳು ಪಂದ್ಯಗಳ ಸರಣಿಯ ಮೊದಲ ಐದು T20 ಪಂದ್ಯದಲ್ಲಿ ಅವರು 63.20 ರ ಸರಾಸರಿಯಲ್ಲಿ 316 ರನ್ ಬಾರಿಸಿದ್ದರು. ಹೀಗಾಗಿ, ತಿಂಗಳ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ (Cameron Green) ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರನ್ ಮಳೆಯನ್ನೇ ಹರಿಸಿದ್ದರು. ಒಟ್ಟು 114 ರನ್ ಹಾಗೂ ಎರಡು ವಿಕೆಟ್ ಪಡೆಯುವ ಮೂಲಕ, ಆಸೀಸ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು, ಭಾರತದ ವಿರುದ್ಧ T20 ಸರಣಿಯಲ್ಲಿ 118ರನ್ ಬಾರಿಸಿದ್ದರು.
ಕಳೆದ ತಿಂಗಳು ನಡೆದ ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಲ್ಲಿ ಟೀಂ ಇಂಡಿಯಾ ಸ್ಪಿನ್ನರ್ Axar Patel, ಬೊಂಬಾಟ್ ಪ್ರದರ್ಶನ ನೀಡಿದ್ದರು. ಮೂರು ಪಂದ್ಯಗಳ ಪೈಕಿ ಒಟ್ಟು 8 ವಿಕೆಟ್ ಕಬಳಿಸಿದ್ದರು. ಅಲ್ಲದೆ, ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.