ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಮುಂಬರುವ ಟಿ20 ವಿಶ್ವಕಪ್ ಗೆ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದೆ.
ಸ್ಟಾರ್ ಆಟಗಾರ ಮಾರ್ಟಿನ್ ಗಪ್ಟಿಲ್ 7ನೇ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಡೆವೊನ್ ಕಾನ್ವೆ ವಿಕೆಟ್ ಕೀಪಿಂಗ್ ಜೊತೆ ಬ್ಯಾಟಿಂಗ್ ಜವ್ಬಾರಿಯನ್ನು ನಿರ್ವಹಿಸಬೇಕಿದೆ. ಅ.22ರಂದು ಸಿಡ್ನಿಯಲ್ಲಿ ನ್ಯೂಜಿಲೆಂಡ್ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ನ್ಯೂಜಿಲೆಂಡ್ ತಂಡ ಗ್ರೂಪ್ 1ರಲ್ಲಿದ್ದು ಅಫ್ಘಾನಿಸ್ಥಾನ ಮತ್ತು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.ಮತ್ತೆರಡು ಅರ್ಹತೆ ಪಡೆದ ತಂಡಗಳ ವಿರುದ್ಧ ಸೆಣಸಲಿದೆ.
ತಂಡದಲ್ಲಿ ಫಿನ್ ಆ್ಯಾಲೆನ್ ಮತ್ತು ಮೈಕಲ್ ಬ್ರೇಸ್ ವೆಲ್ ಹೊಸ ಮುಖಗಳಾಗಿದ್ದಾರೆ.2021ರ ಟಿ20 ವಿಶ್ವಕಪ್ನಲ್ಲಿ ಈ ಇಬ್ಬರು ಆಟಗಾರರು ತಂಡದಲ್ಲಿ ಇರಲಿಲ್ಲ.
2021ರ ಟಿ20 ವಿಶ್ವಕಪ್ ಯುಎಇಯಲ್ಲಿ ನಡೆದಿತ್ತು. ಫೈನಲ್ ನಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡಿತು. ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ ಅದ್ಬುತ ಪ್ರದರ್ಶನ ನೀಡಿದ ಹೊರತಾಗಿಯೂ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್ ಗಳ ಅಂತರದಿಂದ ಸೋಲು ಕಂಡಿತು.
ಈ ಬಾರಿಯ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವುದರಿಂದ ನ್ಯೂಜಿಲೆಂಡ್ ತಂಡ ಕೂಡ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.ಕೇನ್ ಪಡೆಗೆ ಆಸಿಸ್ ವಾತಾವರಣಕ್ಕೆ ಬೇಗೆ ಹೊಂದಿಕೊಳ್ಳಲಿದ್ದು ತಾರಾ ಆಟಗಾರರನ್ನೊಳಗೊಂಡಿದೆ.
ನ್ಯೂಜಿಲೆಂಡ್ : ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಆಲೆನ್, ಟ್ರೆಂಟ್ ಬೌಲ್ಟ್, ಮಿಚೆಲ್ ಬ್ರಾಸೆವೆಲ್, ಮಾರ್ಕ ಚಾಪ್ ಮನ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್), ಲಾಕಿ ಫರ್ಗ್ಯೂಸನ್, ಮಾರ್ಟಿನ್ ಗಪ್ಟಿಲ್, ಆ್ಯಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಜಿಮ್ಮಿ ನಿಶಾಮ್, ಗ್ಲೇನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ.