2022ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಪಟ್ಟಿಯನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಪ್ರಕಟಿಸಿದೆ. ಒಡಿಶಾದ ಹಾಕಿ ಆಟಗಾರ್ತಿ ದೀಪ್ ಗ್ರೇಸ್ ಎಕ್ಕಾ ಅವರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಟೇಬಲ್ ಟೆನ್ನಿಸ್ ಆಟಗಾರ ಶರತ್ ಕಮಲ್ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 25 ಆಟಗಾರರಿಗೆ ಅರ್ಜುನ ಅವಾರ್ಡ್ ಘೋಷಿಸಲಾಗಿದೆ. 7 ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ನಾಲ್ವರಿಗೆ ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ ಪ್ರಕಟಿಸಲಾಗಿದೆ. ನ.30ರಂದು ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಅರ್ಜುನ ಪ್ರಶಸ್ತಿ ಪುರಸ್ಕೃತರು:
1. ದೀಪ್ ಗ್ರೇಸ್ ಎಕ್ಕಾ: ಹಾಕಿ
2. ಸೀಮಾ ಪುನಿಯಾ: ಅಥ್ಲೆಟಿಕ್ಸ್
3. ಎಲ್ದೋಸ್ ಪಾಲ್: ಅಥ್ಲೆಟಿಕ್ಸ್
4. ಅವಿನಾಶ್ ಮುಕುಂದ್ ಸೇಬಲ್: ಅಥ್ಲೆಟಿಕ್ಸ್
5. ಲಕ್ಷ್ಯ ಸೇನ್: ಬ್ಯಾಡ್ಮಿಂಟನ್
6. ಪ್ರಣಯ್ ಎಚ್ಎಸ್: ಬ್ಯಾಡ್ಮಿಂಟನ್
7. ಅಮಿತ್: ಬಾಕ್ಸಿಂಗ್
8. ನಿಖತ್ ಜರೀನ್: ಬಾಕ್ಸಿಂಗ್
9. ಭಕ್ತಿ ಪ್ರದೀಪ ಕುಲಕರ್ಣಿ: ಚೆಸ್
10. ಆರ್ ಪ್ರಗ್ನಾನಂದ: ಚೆಸ್
11. ಶುಶೀಲಾ ದೇವಿ: ಜೂಡೋ
12. ಸಾಕ್ಷಿ ಕುಮಾರಿ: ಕಬಡ್ಡಿ
13. ನಯನ್ ಮೋನಿ ಸೈಕಿಯಾ: ಲಾನ್ ಬೌಲ್
14. ಸಾಗರ್ ಕೈಲಾಸ್ ಓವ್ಹಾಲ್ಕರ್: ಮಲ್ಲಖಾಂಬ್
15. ಎಲವೆನಿಲ್ ವಲರಿವನ್: ಶೂಟಿಂಗ್
16. ಓಂಪ್ರಕಾಶ್ ಮಿಥರ್ವಾಲ್: ಶೂಟಿಂಗ್
17. ಶ್ರೀಜಾ ಅಕುಲಾ: ಟೇಬಲ್ ಟೆನ್ನಿಸ್
18. ವಿಕಾಸ್ ಠಾಕೂರ್: ವೇಟ್ ಲಿಫ್ಟಿಂಗ್
19. ಅಂಶು: ಕುಸ್ತಿ
20. ಸರಿತಾ: ಕುಸ್ತಿ
21. ಪರ್ವೀನ್: ವುಶು
22. ಮಾನಸಿ ಗಿರೀಶ್ಚಂದ್ರ ಜೋಶಿ: ಪ್ಯಾರಾ ಬ್ಯಾಡ್ಮಿಂಟನ್
23. ತರುಣ್ ಧಿಲ್ಲೋನ್: ಪ್ಯಾರಾ ಬ್ಯಾಡ್ಮಿಂಟನ್
24. ಸ್ವಪ್ನಿಲ್ ಸಂಜಯ್ ಪಾಟೀಲ್: ಪ್ಯಾರಾ ಈಜು
25. ಜೆರ್ಲಿನ್ ಅನಿಕಾ ಜೆ: ಕಿವುಡ ಬ್ಯಾಡ್ಮಿಂಟನ್
ದ್ರೋಣಾಚಾರ್ಯ ಪ್ರಶಸ್ತಿ:
1. ಜೀವನ್ಜೋತ್ ಸಿಂಗ್ ತೇಜ: ಬಿಲ್ಲುಗಾರಿಕೆ
2.ಮೊಹಮ್ಮದ್ ಅಲಿ ಕಮರ್: ಬಾಕ್ಸಿಂಗ್
3. ಸುಮಾ ಸಿದ್ಧಾರ್ಥ್ ಶಿರೂರು: ಪ್ಯಾರಾ ಶೂಟಿಂಗ್
4. ಸುಜೀತ್ ಮಾನ್: ಕುಸ್ತಿ
5. ದಿನೇಶ್ ಜವಾಹರ್ ಲಾಡ್: ಕ್ರಿಕೆಟ್
6. ಬಿಮಲ್ ಪ್ರಫುಲ್ಲ ಘೋಷ್: ಫುಟ್ಬಾಲ್
7. ರಾಜ್ ಸಿಂಗ್: ಕುಸ್ತಿ
ಜೀವಮಾನ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿ:
1. ಅಶ್ವಿನಿ ಅಕ್ಕುಂಜಿ ಸಿ: ಅಥ್ಲೆಟಿಕ್ಸ್
2. ಧರಂವೀರ್ ಸಿಂಗ್: ಹಾಕಿ
3. ಬಿ.ಸಿ ಸುರೇಶ್: ಕಬಡ್ಡಿ
4. ನಿರ್ ಬಹದ್ದೂರ್ ಗುರುಂಗ್: ಪ್ಯಾರಾ ಅಥ್ಲೆಟಿಕ್ಸ್