ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ ಟೆಸ್ಟ್ ಕ್ರಿಕೆಟ್ಗೆ ನೀಡಿದ್ದ ನಿವೃತ್ತಿಯನ್ನು ವಾಪಾಸ್ ಪಡೆದಿದ್ದು, ಮತ್ತೆ ಕಂ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಹೊಸ ಕೋಚ್ ಬ್ರೆಂಡನ್ ಮೆಕಲಂ ಮೊಯಿನ್ ಜೊತೆ ಮಾತನಾಡಿ ನಿವೃತ್ತಿ ವಾಪಾಸ್ ಪಡೆಯುವಂತೆ ಮನವೊಲಿಸಿರುವುದು ಪ್ರತಿಫಲ ನೀಡಿದೆ.
ಕಳೆದ ಸೆಪ್ಟಂಬರ್ನಲ್ಲಿ ಮೊಯಿನ್ ಅಲಿ ಟೆಸ್ಟ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು. ಮೊಯಿನ್ 64 ಟೆಸ್ಟ್ ಪಂದ್ಯಗಳಿಂದ 195 ವಿಕೆಟ್ಗಳನ್ನು ಪಡೆದುಕೊಂಡಿದ್ದರು. ಬ್ಯಾಟಿಂಗ್ನಲ್ಲೂ ಮಿಂಚಿದ್ದ ಮೊಯಿನ್ ್5 ಟೆಸ್ಟ್ ಶತಕಗಳನ್ನು ಕೂಡ ತನ್ನ ಹೆಸರಿನಲ್ಲಿ ಹೊಂದಿದ್ದಾರೆ.
ಮೆಕಲಂ ಕೋಚ್ ಆಗಿ ಇಂಗ್ಲೆಂಡ್ ತಂಡ ಸೇರಿಕೊಂಡ ಬಳಿಕ ಮೊಯಿನ್ ಕಂ ಬ್ಯಾಕ್ ಬಗ್ಗೆ ಮಾತನಾಡಿದ್ದರು. ನೆದರ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಮೊಯಿನ್ ಹೊಸ ನಿರ್ಧಾರ ಪ್ರಕಟಿಸಿದ್ದಾರೆ. ಮೊಯಿನ್ ನಿರ್ಧಾರದಿಂದ ಇಂಗ್ಲೆಂಡ್ ತಂಡಕ್ಕೆ ಆಫ್ ಸ್ಪಿನ್ನರ್ ಜೊತೆ ಹೆಚ್ಚುವರಿ ಬ್ಯಾಟ್ಸ್ಮನ್ ಕೂಡ ಟೆಸ್ಟ್ ತಂಡಕ್ಕೆ ಸಿಕ್ಕಾಂತಾಗಿದೆ. ಮೊಯಿನ್ ಟೆಸ್ಟ್ ಜೀವನದ 2ನೇ ಇನ್ನಿಂಗ್ಸ್ನಲ್ಲಿ ಹೇಗೆ ಆಡುತ್ತಾರೆ ಅನ್ನುವ ಬಗ್ಗೆ ಕುತೂಹಲವಿದೆ.