Malaysia Open 2022- ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಪಿ.ವಿ. ಸಿಂಧು…!
ಎರಡು ಬಾರಿ ಒಲಿಂಪಿಯನ್ ಚಾಂಪಿಯನ್ ಪಿ.ವಿ. ಸಿಂಧು ಅವರು ಮಲೇಶ್ಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು 19-21, 21-9, 21-14ರಿಂದ ಥಾಯ್ಲೆಂಡ್ ನ ಫಿಟಾಯಾಪೊರ್ನ್ ಚೈವಾನ್ ಅವರನ್ನು ಪರಾಭವಗೊಳಿಸಿದ್ರು.
ಏಳನೇ ಶ್ರೇಯಾಂಕಿತೆ ಪಿ.ವಿ. ಸಿಂಧು ಅವರು 57 ನಿಮಿಷಗಳ ಹೋರಾಟದಲ್ಲಿ ಗೆಲುವಿನ ನಗೆ ಬೀರಿದ್ರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧು ಅವರು ಚೈನಿಸ್ ಥಾಯ್ ಪೇ ಯ ಟೈ ಟಿಝು ಯಿಂಗ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಪ್ರಣೋಯ್ ರಾಯ್ ಕೂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. 21ನೇ ಶ್ರೇಯಾಂಕಿತ ಪ್ರಣೋಯ್ ರಾಯ್ ಅವರು 21-15, 21-7ರಿಂದ ನಾಲ್ಕನೇ ಶ್ರೇಯಾಂಕಿತ ಚೈನಿಸ್ ತೈಪೆಯ ಚೌ ಟಿಯಾನ್ ಚೆನ್ ಅವರನ್ನು ಅಚ್ಚರಿಗೊಳಿಸಿದ್ರು. ಕ್ವಾರ್ಟರ್ ಫೈನಲ್ ನಲ್ಲಿ ಪ್ರಣೋಯ್ ರಾಯ್ ಮತ್ತು ಇಂಡೊನೇಶ್ಯಾದ ಏಳನೇ ಶ್ರೇಯಾಂಕಿತ ಜೊಂಟನ್ ಕ್ರಿಸ್ಟಿ ಅವರನ್ನು ಎದುರಿಸಲಿದ್ದಾರೆ.