ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಮಿಂಚಿನ ಆಟವಾಡಿದ ಬಳಿಕ ಈಗ ಎಲ್ಲರ ಚಿತ್ತ ಧೋನಿಯತ್ತ ನೆಟ್ಟಿದೆ. ಈ ಮಧ್ಯೆ ಲಖನೌ ವಿರುದ್ಧದ ಪಂದ್ಯದಲ್ಲಿ ಧೋನಿ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ. ಇದಕ್ಕಾಗಿ ಧೋನಿಗೆ ಬೇಕಿರುವುದು ಕೇವಲ 15 ರನ್ಗಳಷ್ಟೇ.
ಟಿ20 ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಲು ಧೋನಿಗೆ ಕೇವಲ 15 ರನ್ಗಳ ಅವಶ್ಯಕತೆಯಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಧೋನಿ ಈ ಸಾಧನೆ ಮಾಡುವ ನಿರೀಕ್ಷೆಯಿದೆ. ವಿಶೇಷ ಎಂದರೆ ಟಿ20 ಕ್ರಿಕೆಟ್ನಲ್ಲಿ ನಾಲ್ವರು ಭಾರತೀಯ ಬ್ಯಾಟ್ಸ್ಮನ್ಗಳು ಮಾತ್ರ ಏಳು ಸಾವಿರಕ್ಕೂ ಅಧಿಕ ರನ್ಗಳಿಸಿದ್ದಾರೆ. ಇದೀಗ ಐದನೇ ಆಟಗಾರನಾಗಿ ಧೋನಿ ಈ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ.
ಮೊದಲ ಪಂದ್ಯದಲ್ಲಿ ಧೋನಿ ಕೇವಲ 38 ಎಸೆತಗಳಲ್ಲಿ 51 ರನ್ ಸಿಡಿಸಿಸಸಸ ಮಿಂಚಿದ್ದರು. ಕೆಕೆಆರ್ ವಿರುದ್ಧದದ ಪಂದ್ಯದಲ್ಲಿ ಧೋನಿ ಮಾತ್ರ ಸಿಎಸ್ಕೆ ಇನ್ನಿಂಗ್ಸ್ನಲ್ಲಿ ಮಿಂಚಿನ ಆಟವಾಡಿದ್ದರಿಂದ ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾಗಿತ್ತು.
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೆಟಿಗರ ಪೈಕಿ, ವಿರಾಟ್ ಕೊಹ್ಲಿ 10,326 ರನ್ ಹೊಡೆದಿದ್ದಾರೆ. ರೋಹಿತ್ ಶರ್ಮಾ 9,936, ಶಿಖರ್ ಧವನ್ 8,818 ರನ್, ರಾಬಿನ್ ಉತ್ತಪ್ಪ 7,070 ರನ್ ಮತ್ತು ಎಂಎಸ್ ಧೋನಿ- 6,985 ರನ್ ಗಳಿಸಿದ್ದಾರೆ.