ಮಹಾರಾಜ್ ಕಪ್ ಟ್ರೋಫಿ ಅನಾವರಣ: ಆಗಸ್ಟ್ 7 ರಿಂದ ಆಗಸ್ಟ್ 26ರ ವರೆಗೆ ಪಂದ್ಯ
ಕರ್ನಾಟಕ ಕ್ರಿಕೆಟ್ ಸಂಸ್ಥೆ (KSCA) ಯುವ ಆಟಗಾರರು ಬೆಳಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಆಡಿಸುತ್ತಿರುವ ಮಹಾರಾಜ್ ಟ್ರೋಫಿ ಟಿ-20 ಟೂರ್ನಿಗೆ ಮೂಹರ್ತ ಫಿಕ್ಸ್ ಮಾಡಲಾಗಿದೆ.
ಟೂರ್ನಿ ಆಗಸ್ಟ್ 7 ರಿಂದ ಆಗಸ್ಟ್ 26ರ ವರೆಗೆ ನಡೆಯಲಿದೆ. ಕರ್ನಾಟಕದಲ್ಲಿ ಕೆಪಿಎಲ್ ಟೂರ್ನಿಯನ್ನು 2005ರಲ್ಲಿ ಮೊದಲ ಬಾರಿಗೆ ಆಡಿಸಲಾಯಿತು. ಈ ಬಗ್ಗೆ ಮಾತನಾಡಿದಿ ಕೆಎಸ್ ಸಿಎ ಅಧ್ಯಕ್ಷ ರೋಜರ್ ಬಿನ್ನಿ. “ಟೂರ್ನಿಯ ವಿಭಿನ್ನವಾಗಿ ನಡೆಸುವ ಇರಾದೆ ಹೊಂದಲಾಗಿದೆ. 2009ರಲ್ಲಿ ಕರ್ನಾಟಕದಲ್ಲಿ ಕೆಪಿಎಲ್ ಹೆಸರಿನಲ್ಲಿ ಆಡಿಸಲಾಯಿತು. ಟೂರ್ನಿಯು ಎಂಟು ಯಶಸ್ವಿ ಆವೃತ್ತಿಗಳನ್ನು ಆಯೋಜಿಸಿದೆ. ಈ ಟೂರ್ನಿಯಿಂದ ಹಲವು ಪ್ರತಿಭಾವಂತ ಯುವ ಆಟಗಾರರು ಬೆಳಕಿಗೆ ಬಂದಿದ್ದಾರೆ. ಯುವಕರ ಉಜ್ವಲ ಭವಿಷ್ಯದ ಉದ್ದೇಶದಿಂದ ಟೂರ್ನಿ ನಡೆಸಲಾಗುತ್ತಿದ್ದು, ಟೂರ್ನಿಗೆ ಮಹಾರಾಜ್ ಟ್ರೋಫಿ ಎಂದು ಹೆಸರಿಸಲಾಗಿದೆ” ಎಂದಿದ್ದಾರೆ.

ಪಂದ್ಯಾವಳಿಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. “ಮಹಾರಾಜ ಟ್ರೋಫಿ KSCA T20 ಮೈಸೂರಿನಲ್ಲಿ ಆಗಸ್ಟ್ 7 ರಂದು ಪ್ರಾರಂಭವಾಗಲಿದ್ದು, ಮೊದಲ ಹಂತದ ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯಲಿದೆ. ಮೈಸೂರಿನಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿದ್ದು, ಬೆಂಗಳೂರಿನಲ್ಲಿ ಫೈನಲ್ ಸೇರಿದಂತೆ ಒಟ್ಟು 16 ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ.
35 ವರ್ಷದೊಳಗಿನ ಎಲ್ಲಾ ಅಗ್ರ ಕ್ರಿಕೆಟಿಗರು ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹರು. ಆಟಗಾರರ ಡ್ರಾಫ್ಟ್ ಮೂಲಕ ತಂಡಗಳನ್ನು ರಚಿಸಲಾಗುವುದು ಮತ್ತು ಕೆಎಸ್‌ಸಿಎ ತಂಡಗಳಿಗೆ ಕ್ಯಾಪ್ಟನ್‌ಗಳು ಮತ್ತು ಉಪನಾಯಕರನ್ನು ನಾಮನಿರ್ದೇಶನ ಮಾಡುತ್ತದೆ. ಮತ್ತು ನಾವು ಪ್ರತಿ ಆರು ತಂಡಗಳಿಗೆ ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಿದೆ,” ಎಂದು ಮೆನನ್ ಹೇಳಿದ್ದಾರೆ.
Maharaja Trophy, KSCA, T-20, Cricket