ಐಪಿಎಲ್‌ನಲ್ಲಿ ಜೋಸ್ ಬಟ್ಲರ್ ಅವರ ಬಿರುಸಿನ ಬ್ಯಾಟಿಂಗ್ ನಿಂದ ಎಲ್ಲಡೆ ಚರ್ಚೆಯಲ್ಲಿದ್ದಾರೆ. ಬಟ್ಲರ್ ಫೀಲ್ಡಿಂಗ್ ಸ್ಕಿಲ್ ನೋಡಿದ್ರೆ ಎಲ್ಲ ಕ್ಷೇತ್ರದಲ್ಲಿ ಅವರು ಉತ್ತಮ ಎಂಬ ಅನುಮಾನ ಮೂಡುವುದು ಸಹಜ. ಈ ಬಾರಿ ಬಟ್ಲರ್ ಅವರ ಅದ್ಭುತ ಫೀಲ್ಡಿಂಗ್ ಕೌಶಲ್ಯ ದಿಂದ ಸುದ್ದಿಯಾದರು.
ಸ್ಪಿನ್ನರ್‌ಗಳ ಮುಂದೆ ಶಿಖರ್ ಸಮಸ್ಯೆ ಎದುರಿಸುತ್ತಿರುವುದು ನಿರಂತರವಾಗಿ ಕಂಡು ಬಂತು. ಇಂತಹ ಪರಿಸ್ಥಿತಿಯಲ್ಲಿ ಗಬ್ಬರ್, ಅಶ್ವಿನ್ ಎದುರು ಹೇಗೆ ಆಡುತ್ತಾರೆ ಎಂದು ಅನುಮಾನವಿತ್ತು. ಪಂಜಾಬ್ ಓಪನರ್ ಶಿಖರ್ ಧವನ್, ಅಶ್ವಿನ್ ಅವರ ಎಸೆತವನ್ನು ಮಿಡ್-ಆನ್ ಮೇಲೆ ದೊಡ್ಡ ಹೊಡೆತಕ್ಕೆ ಮುಂದಾಗಿದ್ದರು.
ಏಕೆಂದರೆ ಪವರ್‌ಪ್ಲೇ ಸಮಯದಲ್ಲಿ ಫೀಲ್ಡರ್ 30 ಯಾರ್ಡ್‌ಗಳ ಒಳಗೆ ಇರುತ್ತಾರೆ. ಧವನ್ ಅವರ ಉದ್ದೇಶ ಸರಿಯೇ ಆಗಿತ್ತು. ಆದರೆ ಅಲ್ಲಿ ಫೀಲ್ಡರ್ ಬಟ್ಲರ್ ಚಿರತೆಯಂತೆ ಜಿಗಿದು ಒಂದು ಕೈಯಿಂದ ಅದ್ಭುತ ಕ್ಯಾಚ್ ಪಡೆದರು. ಹೀಗಾಗಿ ಧವನ್ ಇನ್ನಿಂಗ್ಸ್ ಅಂತ್ಯಗೊಂಡಿದೆ.
https://twitter.com/skipper_kohli/status/1522886754399055872?s=20&t=ZtN7tyRWjG6ns4GOVuMnBA
ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೆಡ್ಡು, ಹೊಡೆದಿದೆ. ಈ ಪಂದ್ಯದಲ್ಲಿ ಪಂಜಾಬ್ ಗೆಲುವಿನ ಹಾದಿಗೆ ಮರಳಲು ತಮ್ಮ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಪ್ರಸಕ್ತ ಐಪಿಎಲ್ ಋತುವಿನಲ್ಲಿ 588 ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿರುವ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಬಹುತೇಕ ಪ್ರತಿ ಪಂದ್ಯದಲ್ಲೂ ರನ್ ಕಲೆ ಹಾಕಿ ಅಬ್ಬರಿಸುತ್ತಿದ್ದಾರೆ. ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಆಡುತ್ತಿರುವ ಪಂಜಾಬ್ ತಂಡವು ಪ್ಲೇ ಆಫ್ ರೇಸ್‌ನಲ್ಲಿ ಉಳಿಯಲು ರಾಜಸ್ಥಾನ ವಿರುದ್ಧ ಗೆಲುವು ದಾಖಲಿಸಬೇಕಾಗಿದೆ.