ರೋಹಿತ್ ಶರ್ಮಾ ಪ್ರಸ್ತುತ ಯುಗದ ಅತ್ಯಂತ ಪ್ರತಿಭಾವಂತ ಆಟಗಾರರಲ್ಲಿ ಒಬ್ಬರು. 2009 ರಲ್ಲಿ ನಡೆದ ಐಪಿಎಲ್‌ನ ಎರಡನೇ ಸೀಸನ್‌ನಲ್ಲಿ ಹಿಟ್‌ಮ್ಯಾನ್ ನಾಯಕತ್ವಕ್ಕಾಗಿ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ಲೆಜೆಂಡರಿ ಆಟಗಾರ ಆಡಮ್ ಗಿಲ್‌ಕ್ರಿಸ್ಟ್ ಹೇಳಿದ್ದರು. ಅದೇ ವರ್ಷ ರೋಹಿತ್ ಅವರನ್ನು ಟೀಮ್ ಇಂಡಿಯಾದ ಎಲ್ಲಾ ಮೂರು ಸ್ವರೂಪಗಳ ನಾಯಕರನ್ನಾಗಿ ಮಾಡುವ ಸಮಯ ಕೂಡ ಬಂದಿತ್ತು.
ನಾಯಕತ್ವವನ್ನು ವಹಿಸಿಕೊಂಡ ನಂತರ, ರೋಹಿತ್ ತಮ್ಮ ಪ್ರದರ್ಶನದಿಂದ ಮುಂಬೈಯನ್ನು ಆರನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುನ್ನಡೆಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಐಪಿಎಲ್ 2022 ರ 14 ಪಂದ್ಯಗಳಲ್ಲಿ, ರೋಹಿತ್ 19 ರ ಸರಾಸರಿಯಲ್ಲಿ ಕೇವಲ 268 ರನ್ ಗಳಿಸಿದರು. ಇವರ ಸ್ಟ್ರೈಕ್ ರೇಟ್ 120. ಮುಂಬೈ ಇಂಡಿಯನ್ಸ್‌ನ ದುರ್ಬಲ ಬ್ಯಾಟಿಂಗ್ ಲೈನ್‌ಅಪ್‌ಗೆ ಬಲ ತುಂಬುವಲ್ಲಿ ರೋಹಿತ್ ವಿಫಲರಾದರು.
ಇತಿಹಾಸದಲ್ಲಿ ಮೊದಲ ಬಾರಿಗೆ, ರೋಹಿತ್ ಐಪಿಎಲ್ ಋತುವಿನಲ್ಲಿ ಒಂದು ಅರ್ಧಶತಕವನ್ನು ಬಾರಿಸಲಿಲ್ಲ. ಈ ಋತುವಿನಲ್ಲಿ ರೋಹಿತ್ ಅವರ ಕಳಪೆ ಫಾರ್ಮ್‌ಗೆ ಸಂಬಂಧಿಸಿದ ಐದು ಕಾರಣ ಇಲ್ಲಿದೆ.

-
ದುರ್ಬಲ ಪಾದದ ಚಲನೆ
ರೋಹಿತ್ ಅವರ ಕೈ, ಕಣ್ಣಿನ ಸಮನ್ವಯ ಯಾವಾಗಲೂ ಅತ್ಯುತ್ತಮವಾಗಿದೆ. ಇದರೊಂದಿಗೆ ಅವರ ಪಾದ ಚಲನೆ ರೋಹಿತ್ ಅವರ ಬ್ಯಾಟಿಂಗ್‌ನ ವಿಶೇಷತೆಯಾಗಿತ್ತು. ಐಪಿಎಲ್ 2022 ರಲ್ಲಿ ರೋಹಿತ್ ಅವರ ಕಾಲುಗಳು ಚಲಿಸಲಿಲ್ಲ. ಚೆಂಡು ಪಿಚ್‌ಗೆ ಹೋಗುವ ಬದಲು ಸ್ಟ್ಯಾಂಡಿಂಗ್ ಶಾಟ್ ಆಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿತು. ಇದರಿಂದಾಗಿ ವಿಕೆಟ್ ಕಳೆದುಕೊಂಡರು.

-
ಒತ್ತಡ ಮೆಟ್ಟಿನಿಲ್ಲುವಲ್ಲಿ ವಿಫಲ
ಐಪಿಎಲ್‌ನಲ್ಲಿ ಇಲ್ಲಿಯವರೆಗೆ ಯಾವುದೇ ನಾಯಕ ಐದು ಟ್ರೋಫಿಗಳನ್ನು ಗೆದ್ದಿಲ್ಲ. ಈ ಯಶಸ್ಸನ್ನು ಪುನರಾವರ್ತಿಸುವ ಒತ್ತಡ ರೋಹಿತ್ ಮೇಲೆ ಸ್ಪಷ್ಟವಾಗಿ ಗೋಚರಿಸಿತು. ಕಳೆದ ಋತುವಿನ ವೈಫಲ್ಯದ ನಂತರ, ಅವರು ಪ್ರತಿ ಪಂದ್ಯದಲ್ಲೂ ವಿಭಿನ್ನವಾಗಿ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಓಪನಿಂಗ್ ವೇಳೆ ತೊಂದರೆಯಾಗಿದ್ದರೆ ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ಕೆಲವು ಪಂದ್ಯಗಳನ್ನು ಆಡಬಹುದಿತ್ತು.
ಆರಂಭಿಕ ಓವರ್‌ನ ಸೀಮ್ ಮತ್ತು ಸ್ವಿಂಗ್ ಬದಲಿಗೆ, ಪಿಚ್‌ನಿಂದ ವೇಗದ ಬೌಲರ್‌ಗಳಿಗೆ ಸಹಾಯವಾಗುತ್ತಿತ್ತು. ಇದು ಮುಗಿದ ನಂತರ ರೋಹಿತ್ ಬ್ಯಾಟಿಂಗ್‌ಗೆ ಬಂದಿದ್ದರೆ ಉತ್ತಮವಾಗುತ್ತಿತ್ತು. ಒಂದು ದೊಡ್ಡ ಇನ್ನಿಂಗ್ಸ್ ಐಪಿಎಲ್‌ನಲ್ಲಿ ರೋಹಿತ್ ಅವರ ಆತ್ಮವಿಶ್ವಾಸವನ್ನು ಹಿಂದಿರುಗಿಸಬಹುದಿತ್ತು. ಇದು ತಂಡದ ಬ್ಯಾಟಿಂಗ್ ಅನ್ನು ಬಲಪಡಿಸುತ್ತದೆ. ರೋಹಿತ್ ಋತುವಿನ ಆರಂಭದಲ್ಲಿ ಯಶಸ್ಸನ್ನು ಪಡೆಯಲು ಎಲ್ಲಾ ತಂತ್ರಗಳನ್ನು ಪ್ರಯತ್ನಿಸಿದರು, ಆದರೆ ಅವರು ಯಶಸ್ವಿಯಾಗಲಿಲ್ಲ.

-
ರೋಹಿತ್ ವೇಗದ ಬೌಲಿಂಗ್ ಮುಂದೆ ವಿಫಲ
ವೇಗಿಗಳ ಮುಂದೆ ರೋಹಿತ್ ಅವರ ಬ್ಯಾಟ್ ಎಳ್ಳಷ್ಟೂ ಸದ್ದು ಮಾಡಲಿಲ್ಲ. 14 ಇನ್ನಿಂಗ್ಸ್‌ಗಳಲ್ಲಿ 9 ಬಾರಿ ವೇಗದ ಬೌಲರ್‌ಗಳಿಗೆ ಇವರು ಬಲಿಯಾಗಿದ್ದಾರೆ. ರೋಹಿತ್ ವೇಗಿಗಳ ಮುಂದೆ 219 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ 121 ಮಾತ್ರ ಆಗಿತ್ತು. ವೇಗದ ಬೌಲಿಂಗ್ ಮುಂದೆ ನಿರಂತರವಾಗಿ ಪುಲ್ ಶಾಟ್ ಬಾರಿಸುತ್ತಿದ್ದ ರೋಹಿತ್ ಈ ಋತುವಿನಲ್ಲಿ ಕೇವಲ 12 ಸಿಕ್ಸರ್ ಹಾಗೂ 24 ಬೌಂಡರಿಗಳನ್ನು ಬಾರಿಸಿದ್ದಾರೆ. ವೇಗದ ಬೌಲಿಂಗ್‌ನಲ್ಲಿ ರೋಹಿತ್‌ನ ದೌರ್ಬಲ್ಯ ಇಡೀ ತಂಡವನ್ನು ಆವರಿಸಿತು.

-
ಮಾನಸಿಕ ದಣಿವು
ರೋಹಿತ್ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಇದರಿಂದ ಮಾನಸಿಕ ದಣಿವು ಅವರ ಆಟದಲ್ಲೂ ಕಾಣುತ್ತಿತ್ತು. ತಂಡದ ಕೊನೆಯ ಲೀಗ್ ಪಂದ್ಯದ ನಂತರ, ನನ್ನ ಪ್ರದರ್ಶನದಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಆದಾಗ್ಯೂ, ಇದು ನನಗೆ ಮೊದಲು ಸಂಭವಿಸಿಲ್ಲ. ಮಾನಸಿಕ ಅಂಶವನ್ನು ಗಮನದಲ್ಲಿಟ್ಟುಕೊಂಡು ನಾನು ಫಾರ್ಮ್‌ಗೆ ಮರಳಲು ಪ್ರಯತ್ನಿಸುತ್ತೇನೆ. ಇದಕ್ಕಾಗಿ ಬಿಡುವು ಸಿಕ್ಕಾಗಲೆಲ್ಲಾ ನಾನು ಆಡುವ ರೀತಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುತ್ತೇನೆ” ಎಂದು ರೋಹಿತ್ ಹೇಳಿದ್ದಾರೆ.

-
ಬೇರೆ ಬ್ಯಾಟರ್‌ಗಳ ವೈಫಲ್ಯವು ರೋಹಿತ್ ಮೇಲೆ ಒತ್ತಡ
ಮುಂಬೈನ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಪರಿಣಾಮವು ರೋಹಿತ್ ಬ್ಯಾಟಿಂಗ್ ಮೇಲೆ ಬೀರಿತು. ಇಶಾನ್ ಕಿಶನ್ ಋತುವಿನ ಅಂತ್ಯದ ವೇಳೆಗೆ 400 ರನ್ ಗಳ ಗಡಿ ದಾಟಿದರು, ಆದರೆ ಆರಂಭದಲ್ಲಿ ತಂಡ 8 ಸೋಲುಗಳನ್ನು ಕಂಡಾಗ ಅವರ ಪ್ರದರ್ಶನವು ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಕೀರಾನ್ ಪೊಲಾರ್ಡ್ ಅವರ ನಿರಾಶಾದಾಯಕ ಪ್ರದರ್ಶನದಿಂದಾಗಿ ಮುಂಬೈನ ಮಧ್ಯಮ ಕ್ರಮಾಂಕ ಒತ್ತಡಕ್ಕೆ ಸಿಲುಕಿತು. ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅನುಪಸ್ಥಿತಿಯಲ್ಲಿ, MI ಸಹ ಆರಂಭಿಕ ಪಂದ್ಯಗಳಲ್ಲಿ ಅತ್ಯುತ್ತಮ ತಂಡವನ್ನು ಕಟ್ಟುವಲ್ಲಿ ವಿಫಲವಾಯಿತು.