ಟಿ20 ಕ್ರಿಕೆಟ್ ನ ಬಲಿಷ್ಠ ಆಟಗಾರ ಕಿರಾನ್ ಪೊಲಾರ್ಡ್ ಐಪಿಎಲ್ಗೆ ನಿವೃತ್ತಿ ಘೋಷಿಸಿದ್ದಾರೆ. ಮುಂಬೈ ಇಂಡಿಯನ್ಸ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ಆಯ್ಕೆ ಮಾಡಿದೆ.
ಕಳೆದ 13 ಸೀಸನ್ಗಳಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಪೊಲಾರ್ಡ್ ಮ್ಯಾಚ್ ವಿನ್ನರ್ ಆಗಿದ್ದರು. 2010ರಲ್ಲಿ ಟೈ ಬ್ರೇಕರ್ ನಿಯಮದಡಿ ಮುಂಬೈ ಫ್ರಾಂಚೈಸಿ ಅವರನ್ನು ಕರೆತಂದಿತ್ತು. ನಂತರ ತಂಡದ ಪ್ರಮುಖ ಆಟಗಾರರಾಗಿ ಹೊರಹೊಮ್ಮಿದರು. ಮುಂಬೈ ತಂಡ 5 ಐಪಿಎಲ್ ಟ್ರೋಫಿ ಹಾಗೂ 2 ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯಿತು. 100 ಐಪಿಎಲ್ ಪಂದ್ಯಗಳನ್ನು ಆಡಿದ ಕೆಲವೇ ಆಟಗಾರರ ಪೈಕಿ ಕಿರಾನ್ ಪೊಲಾರ್ಡ್ ಕೂಡ ಒಬ್ಬರಾಗಿದ್ದಾರೆ.
35 ವರ್ಷದ ಮಾಜಿ ವಿಂಡೀಸ್ ನಾಯಕ ಹಲವಾರು ಕಠಿಣ ಸಂದರ್ಭಗಳಲ್ಲಿ ಮುಂಬೈ ತಂಡಕ್ಕೆ ಆಪದ್ಬಾಂಧವನಾಗಿದ್ದಾರೆ. ಆದರೆ ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಲೀಗ್ನಲ್ಲೆ ಟೂರ್ನಿಯಿಂದ ಹೊರ ಬಿತ್ತು. ಕಿರಾನ್ ಪೊಲಾರ್ಡ್ ಕಳಪೆ ಪ್ರದರ್ಶನ ನೀಡಿದರು.ಪೊಲಾರ್ಡ್ 11 ಪಂದ್ಯಗಳಿಂದ 144 ರನ್ ಹೊಡೆದರು.
ಇನ್ನು ಕೆಲವು ವರ್ಷಗಳ ಕಾಲ ಆಡಬೇಕು ಅನ್ನೋದು ಅಷ್ಟು ಸುಲಭದ ನಿರ್ಧಾರವಲ್ಲ. ಅದ್ಭುತ ಫ್ರಾಂಚೈಸಿಗೆ ಬದಲಾವಣೆ ಬೇಕಿದೆ. ನಾನು ಯಾವಗಲೂ ಮುಂಬೈ ಇಂಡಿಯನ್ಸ್ ಆಗಿಯೇ ಇರುತ್ತೇನೆ. ಐಪಿಎಲ್ ಯಶಸ್ವಿ ತಂಡವನ್ನು ಪ್ರತಿನಿಧಿಸಿದಕ್ಕೆ ಹೆಮ್ಮೆ ಅನಿಸುತ್ತದೆ ಎಂದಿದ್ದರು.