K.L. Rahul – ಎನ್ ಸಿ ಎನಲ್ಲಿ ಬ್ಯಾಟಿಂಗ್ ಅಭ್ಯಾಸ..!

ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಕೆ.ಎಲ್. ರಾಹುಲ್ ಅವರು ಮತ್ತೆ ಮೈದಾನಕ್ಕಿಳಿದಿದ್ದಾರೆ.
ತೊಡೆ ಸಂದು ನೋವಿನಿಂದ ಚೇತರಿಸಿಕೊಂಡಿರುವ ಕೆ.ಎಲ್. ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟ್ ಕಟ್ಟಿ ಬ್ಯಾಟಿಂಗ್ ತಾಲೀಮು ನಡೆಸುತ್ತಿದ್ದಾರೆ.
ಐಪಿಎಲ್ ನಂತರ ತೊಡೆ ಸಂದು ನೋವಿನಿಂದ ಬಳಲುತ್ತಿದ್ದ ಕೆ.ಎಲ್. ರಾಹುಲ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಬಳಿಕ ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ರೂ ಕೆ.ಎಲ್. ರಾಹುಲ್ ಅವರು ನೋವಿನಿಂದ ಪೂರ್ತಿಯಾಗಿ ವಾಸಿಯಾಗಿರಲಿಲ್ಲ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಜರ್ಮನಿಗೆ ತೆರಳಿದ್ದರು. ಅಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.

ಇದೀಗ ಮತ್ತೆ ಮೈದಾನಕ್ಕಿಳಿದಿರುವ ಕೆ.ಎಲ್. ರಾಹುಲ್ ಅವರು ಟಿ-20 ವಿಶ್ವಕಪ್ ನತ್ತ ಚಿತ್ತವನ್ನಿಟ್ಟಿದ್ದಾರೆ. ಟಿ-20 ವಿಶ್ವಕಪ್ ಟೂರ್ನಿಗೆ ಇನ್ನುಳಿದಿರುವುದು ಮೂರೇ ಮೂರು ತಿಂಗಳು ಮಾತ್ರ. ಈ ನಡುವೆ, ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯನ್ನು ಆಡಲಿದೆ. ಏಷ್ಯಾ ಕಪ್ ಟೂರ್ನಿಯನ್ನು ಆಡಲಿದೆ.
ಹೀಗಾಗಿ ಕೆ.ಎಲ್. ರಾಹುಲ್ ಫುಲ್ ಫಿಟ್ ಯಾವಾಗ ಆಗುತ್ತಾರೆ ಅನ್ನೋದು ಮುಖ್ಯವಾಗಿರುತ್ತದೆ. ಐಸಿಸಿ ವಿಶ್ವಕಪ್ ಟೂರ್ನಿಗೆ ಕೆ.ಎಲ್. ರಾಹುಲ್ ಅನಿವಾರ್ಯವಾಗಿದ್ದಾರೆ. ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸುವ ಕೆ.ಎಲ್. ರಾಹುಲ್ ಮೇಲೆ ಸಾಕಷ್ಟು ನಿರೀಕ್ಷೆಗಳೂ ಇವೆ.
ಈ ನಡುವೆ, ಕೆ.ಎಲ್. ರಾಹುಲ್ ಮದುವೆಯ ಸುದ್ದಿಯೂ ಜೋರಾಗಿ ಕೇಳಿ ಬರುತ್ತಿದೆ. ಬಾಲಿವುಡ್ ನಟಿ ಆತಿಯಾ ಶೆಟ್ಟಿ ಜೊತೆ ಮದುವೆಯಾಗುತ್ತಿರುವುದು ಖಚಿತವಾಗಿದೆ. ಆದ್ರೆ ಯಾವಾಗ ಎಂಬುದು ಮಾತ್ರ ತಿಳಿದು ಬಂದಿಲ್ಲ. ಮೂಲಗಳ ಪ್ರಕಾರ ಮುಂದಿನ ವರ್ಷ ಕೆ.ಎಲ್. ರಾಹುಲ್ ಮದುವೆಯಾಗುತ್ತಿದ್ದಾರೆ ಎಂಬ ಮಾತುಗಳು ಇವೆ.
ಒಟ್ಟಿನಲ್ಲಿ ಕೆ.ಎಲ್. ರಾಹುಲ್ ಗಾಯದಿಂದ ಚೇತರಿಸಿಕೊಂಡು ಮತ್ತೆ ಮೈದಾನಕ್ಕಿಳಿದಿರುವುದು ಒಳ್ಳೆಯ ಬೆಳವಣಿಗೆ. ಕೆ.ಎಲ್. ರಾಹುಲ್ ಬೇಗನೇ ಫಿಟ್ ಆಗಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿ.
K L Rahul – ಎನ್ ಸಿ ಎನಲ್ಲಿ ಬ್ಯಾಟಿಂಗ್ ಅಭ್ಯಾಸ..!