ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಇದು ಮಾಡು ಇಲ್ಲವೆ ಮಡಿ ಪಂದ್ಯ. ಟೂರ್ನಿಯಲ್ಲಿ ರಾಜಸ್ಥಾನದ ಸ್ಪಿನ್ ಬಲ ಎದುರಾಳಿಗಳಿಗೆ ನೀರು ಕುಡಿಸಿದೆ. ಡೆಲ್ಲಿ ವೇಗದ ಬೌಲಿಂಗ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದೆ. ಎರಡೂ ತಂಡಗಳಲ್ಲೂ ಬಿಗ್ ಹಿಟ್ಟರ್ ಗಳದ್ದೇ ಕಮಾಲ್..!
ಪಡಿಕಲ್ ಪರದಾಟ:
ದೇವದತ್ ಪಡಿಕಲ್ ಡೆಲ್ಲಿ ಕ್ಯಾಪಿಟಲ್ಸ್ ವೇಗದ ಬೌಲರ್ ಅನ್ರಿಚ್ ನೋರ್ಟ್ಜೆ ಎದುರು ಪರದಾಡಿದ್ದಾರೆ. ಪಡಿಕಲ್ ನೋರ್ಟ್ಜೆಯ 8 ಎಸೆತಗಳಲ್ಲಿ 12 ರನ್ ಗಳಿಸಿದ್ದಾರೆ. ಆದರೆ 3 ಇನ್ನಿಂಗ್ಸ್ ಗಳ ಪೈಕಿ 2 ಬಾರಿ ಔಟ್ ಆಗಿದ್ದಾರೆ.
ವಾರ್ನರ್ಗೆ ಕೃಷ್ಣನ ಕಾಟ..!
ಪ್ರಸಿಧ್ ಕೃಷ್ಣ ಡೇವಿಡ್ ವಾರ್ನರ್ ಎದುರು ಉತ್ತಮ ದಾಖಲೆ ಹೊಂದಿದ್ದಾರೆ. 3 ಇನ್ನಿಂಗ್ಸ್ ಗಳ ಮುಖಾಮುಖಿಯಲ್ಲಿ ವಾರ್ನರ್ 2 ಬಾರಿ ಪ್ರಸಿಧ್ ಗೆ ವಿಕೆಟ್ ಒಪ್ಪಿಸಿದ್ದಾರೆ. ಅಷ್ಟೇ ಅಲ್ಲದೆ ವಾರ್ನರ್ 21 ಎಸೆತಗಳಲ್ಲಿ 28 ರನ್ ಮಾತ್ರ ಗಳಿಸಿದ್ದಾರೆ.
ಜಾಸ್ ದಿ ಬಾಸ್..!
ಜೋಸ್ ಬಟ್ಲರ್ ಕುಲ್ ದೀಪ್ ಯಾದವ್ ವಿರುದ್ಧ 163.63 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಬಟ್ಲರ್ ಕುಲ್ ದೀಪ್ ಎಸೆದ 33 ಎಸೆತಗಳ ಪೈಕಿ 54ರನ್ ಗಳಿಸಿದ್ದಾರೆ. ಕೇವಲ ಒಂದು ಬಾರಿ ಮಾತ್ರ ಬಟ್ಲರ್ ಔಟ್ ಆಗಿದ್ದಾರೆ.
100 ಸಿಕ್ಸರ್..!
ರಾಜಸ್ಥಾನ ರಾಯಲ್ಸ್ ಈ ಬಾರಿಯ ಐಪಿಎಲ್ನಲ್ಲಿ 102 ಸಿಕ್ಸರ್ ಸಿಡಿಸಿದ ಏಕೈಕ ತಂಡವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ 81 ಸಿಕ್ಸರ್ ಸಿಡಿಸಿದೆ.
ಸ್ಪಿನ್ ಬಲ..!
ಸ್ಪಿನ್ ಬೌಲಿಂಗ್ ಮೂಲಕ ರಾಯಲ್ಸ್ 32 ವಿಕೆಟ್ ಪಡೆದುಕೊಂಡಿದೆ. 7.71ರ ಎಕಾನಮಿ ಹಾಗೂ 20.91ರ ಅತ್ಯುತ್ತಮ ಸರಾಸರಿಯನ್ನು ರಾಯಲ್ಸ್ ಸ್ಪಿನ್ನರ್ಗಳು ಹೊಂದಿದ್ದಾರೆ.
ಪವರ್ ಹಿಟ್ಟರ್..!
ಪವರ್ ಪ್ಲೇ ನಲ್ಲಿ ವಾರ್ನರ್ ಮತ್ತು ಪೃಥ್ವಿ ಷಾ ಡೇಂಜರಸ್. ವಾರ್ನರ್ 163.28 ಹಾಗೂ ಪೃಥ್ವಿ 159.50ಯ ಸ್ಟ್ರೈಕ್ ರೇಟ್ ಹೊಂದಿದ್ದಾರೆ.