ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯ ಜೋ ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ 10,000 ರನ್ ದಾಖಲಿಸಿದ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ತಂಡದ ಪರವಾಗಿ ಈ ಸಾಧನೆ ಮಾಡಿದ ಕೇವಲ 2ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ರೂಟ್ ಪಾಲಾಗಿದೆ. ರೂಟ್ ನ್ಯೂಜಿಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. 10,000 ಟೆಸ್ಟ್ ರನ್ಗಳ ಸಂಭ್ರಮದ ಜೊತೆ ತಂಡಕ್ಕೆ ಗೆಲುವು ಕೂಡ ತಂದು ಕೊಟ್ಟಿದ್ದಾರೆ.
ಇಂಗ್ಲೆಂಡ್ನಲ್ಲಿ ಕ್ರಿಕೆಟ್ ಆಟ ಹುಟ್ಟಿದರೂ, ಆ ತಂಡದ ಹೆಚ್ಚು ಆಟಗಾರರು 10,000 ಟೆಸ್ಟ್ ರನ್ಗಳ ಗಡಿ ದಾಟಿಲ್ಲ. ಮಾಜಿ ನಾಯಕ ಅಲಿಸ್ಟರ್ ಕುಕ್ ಮೊದಲಿಗರಾಗಿ ಈ ಸಾಧನೆ ಮಾಡಿದ್ದರು. ಕುಕ್ 162 ಪಂದ್ಯಗಳಿಂದ 12, 472 ರನ್ಗಳಿಸಿದ್ದರು. ಈಗ ರೂಟ್ 118ನೇ ಟೆಸ್ಟ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ ಕುಕ್ ಟೆಸ್ಟ್ನಲ್ಲಿ 26 ಶತಕ ಬಾರಿಸಿದ್ದರು. ರೂಟ್ 27ನೇ ಶತಕ ಬಾರಿಸಿ ಆ ದಾಖಲೆಯನ್ನು ಕೂಡ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
