ನಿಜಕ್ಕೂ ಈ ಬೌಲರ್ ಈ ರೀತಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಯಾರು ಊಹಿಸಿರಲು ಸಾಧ್ಯವೇ ಇಲ್ಲ. ಆದರೂ ಇವರು ಬ್ಯಾಟ್ ನಿಂದ ವಿಶ್ವದಾಖಲೆ ನಿರ್ಮಿಸಿದ್ದಾರೆ ಎಂದರೇ ಇದು ಅವರ ಬ್ಯಾಟಿಂಗ್ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಅಸಲಿಗೆ ಈ ಯಾರ್ಕರ್ ಸ್ಪೇಷಲಿಸ್ಟ್ ಬ್ಯಾಟಿಂಗ್ ನೋಡಿದರೆ ಖಂಡಿತವಾಗಿಯೂ, 2007ರಲ್ಲಿ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಆಡಿದ ನೆನಪು ಬಾರದೆ ಇರದು.
ಈ ನೆನಪು ಬರಲು ಕಾರಣ ಬಹಳಷ್ಟಿವೆ. ಇದರಲ್ಲಿ ಕೆಲವು ಸಾಮ್ಯತೆಗಳಿವೆ. ಯುವಿ ಇಂಗ್ಲೆಂಡ್ ವಿರುದ್ಧ ಟಿ-20ಯಲ್ಲಿ ಆರು ಸಿಕ್ಸರ್ ಬಾರಿಸಿದ್ದರು.. ಬುಮ್ರಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ನಲ್ಲಿ 29 ರನ್ ಬಾರಿಸಿದರು. ಅಲ್ಲದೆ ಉಭಯ ಬ್ಯಾಟ್ಸ್ ಮನ್ ಗಳು ದಂಡಿಸಿದ ಬೌಲರ್ ಒಬ್ಬನೇ ಆತನೇ ಸ್ಟುವರ್ಟ್ ಬ್ರಾಡ್.. 2007ರಲ್ಲಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದ ಯುವಿ ವಿಶ್ವದ ಗಮನ ಸೆಳೆದಿದ್ದರು. ಈಗ ಬುಮ್ರಾ ಸಹ ಒಂದೇ ಓವರ್ ನಲ್ಲಿ 29 ರನ್ ಗಳನ್ನು ಟೆಸ್ಟ್ ನಲ್ಲಿ ಬಾರಿಸಿ ಅಬ್ಬರಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿದೆ. ಪಂದ್ಯದ ಎರಡನೇ ದಿನದಂದು ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಅಬ್ಬರದ ಬ್ಯಾಟಿಂಗ್ ಮಾಡಿ 16 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು. ಒಂದೇ ಓವರ್ನಲ್ಲಿ ಬ್ರಾಡ್ 35 ರನ್ ಬಿಟ್ಟುಕೊಟ್ಟರು. ಇದು 145 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಎಂದು ಸಾಬೀತಾಯಿತು. ಇದರೊಂದಿಗೆ ಟೆಸ್ಟ್ನಲ್ಲಿ ಒಂದು ಓವರ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವೆಸ್ಟ್ ಇಂಡೀಸ್ ದಂತಕಥೆ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಬುಮ್ರಾ ಮುರಿದರು.
World record alert: 35 runs in a single over – Bumrah is the hero. pic.twitter.com/B43Ic5T9mD
— Johns. (@CricCrazyJohns) July 2, 2022
ಸ್ಟುವರ್ಟ್ ಬ್ರಾಡ್ ಭಾರತೀಯ ಇನಿಂಗ್ಸ್ನ 84 ನೇ ಓವರ್ಗೆ ಬಂದರು ಮತ್ತು ಅದೇ ಓವರ್ನಲ್ಲಿ 35 ರನ್ ಗಳಿಸಲಾಯಿತು. ಇದರಲ್ಲಿ 29 ರನ್ಗಳು ಬುಮ್ರಾ ಅವರ ಬ್ಯಾಟ್ನಿಂದ ಬಂದವು ಮತ್ತು ಉಳಿದ 6 ಹೆಚ್ಚುವರಿ ರನ್ಗಳು. ಬುಮ್ರಾ ಅವರ 31 ರನ್ಗಳಲ್ಲಿ 29 ಈ ಓವರ್ನಿಂದ ಬಂದವು.
ವೆಸ್ಟ್ ಇಂಡೀಸ್ನ ಅನುಭವಿ ಬ್ಯಾಟ್ಸ್ಮನ್ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಜಸ್ಪ್ರೀತ್ ಮುರಿದರು. 2003-04ರಲ್ಲಿ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ರಾಬಿನ್ ಪೀಟರ್ಸನ್ ಅವರ ಓವರ್ನಲ್ಲಿ ಲಾರಾ 28 ರನ್ ಗಳಿಸಿದ್ದರು. ಇದಲ್ಲದೇ 2013-14ರಲ್ಲಿ ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ನಡುವೆ ನಡೆದ ಟೆಸ್ಟ್ನಲ್ಲಿ ಆಸ್ಟ್ರೇಲಿಯದ ಬ್ಯಾಟ್ಸ್ಮನ್ ಜಾರ್ಜ್ ಬೈಲಿ ಬೌಲರ್ ಜೇಮ್ಸ್ ಎಡರ್ಸನ್ ಎಸೆತದಲ್ಲಿ 28 ರನ್ ಗಳಿಸಿದ್ದರು. ಇದೇ ಸಮಯದಲ್ಲಿ ಬುಮ್ರಾ ಬ್ಯಾಟ್ನಿಂದ 29 ರನ್ಗಳು ಬಂದವು.
2007ರಲ್ಲಿ ಬ್ರಾಡ್ನ ಓವರ್ನಲ್ಲಿ ಯುವರಾಜ್ 6 ಸಿಕ್ಸರ್
2007ರಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ-20 ವಿಶ್ವಕಪ್ನಲ್ಲಿ ಯುವರಾಜ್ ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ 6 ಸಿಕ್ಸರ್ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ವಾಸ್ತವವಾಗಿ, ಯುವಿಯ ಶೈಲಿ ಹೆಚ್ಚು ಆಕ್ರಮಣಕಾರಿಯಾಯಿತು. ಇದಾದ ಬಳಿಕ ಸ್ಟುವಾರ್ಡ್ ಬ್ರಾಡ್ 19ನೇ ಓವರ್ ಬೌಲ್ ಮಾಡಲು ಬಂದಾಗ ಯುವರಾಜ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋಲನ್ನು ಎದುರಿಸಬೇಕಾಯಿತು.