ಜಪಾನ್ ಓಪನ್: ಎಚ್.ಎಸ್.ಪ್ರಣಯ್ ಶುಭಾರಂಭ
ಭಾರತದ ಪ್ರತಿಭಾವಂತ ಬ್ಯಾಡ್ಮಿಂಟನ್ ಪಟು ಎಚ್.ಎಸ್.ಪ್ರಣಯ್, ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ಶುಭಾರಂಭ ಮಾಡಿದ್ದಾರೆ.
ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಎಚ್.ಎಸ್.ಪ್ರಣಯ್ ಅವರ ಎದುರಾಳಿ ಹಾಂಕಾಂಗ್ ನ ನಂಗ್ ಕಾ ಲಾಂಗ್ ಆಂಗನ್, ಗಾಯದ ಸಮಸ್ಯೆ ಎದುರಿಸಿದ್ದರಿಂದ ಸ್ಪರ್ಧೆಯಿಂದ ಹಿಂದಕ್ಕೆ ಸರಿದರು. ಮೊದಲ ಗೇಮ್‌ನಲ್ಲಿ ಉಭಯ ಆಟಗಾರರು ಸಮಬಲ ಪೈಪೋಟಿ ನೀಡಿದ್ದರಿಂದ ಪ್ರತಿ ಅಂಕಕ್ಕೂ ಜಿದ್ದಾಜಿದ್ದಿನ ಹೋರಾಟ ನಡೆಯಿತು.
ವಿಶ್ವ ರ‍್ಯಾಂಕಿಂಗ್‌ನಲ್ಲಿ 12 ನೇ ಸ್ಥಾನದಲ್ಲಿರುವ ಹಾಂಕಾಂಗ್‌ನ ನಂಗ್ ಕಾ ಲಾಂಗ್ ಆಂಗನ್ ಅವರಿಗಿಂತ ಒಂದು ಅಂಕ (11-10)ದಿಂದ ಮುಂದೆ ಇದ್ದರು.
ಆಗ ನಂಗ್ ಕಾ ಲಾಂಗ್ ಆಂಗನ್ ಗಾಯಾಗೊಂಡಿದ್ದರಿಂದ ಸ್ಪರ್ಧೆಯಿಂದ ಹಿಂದಕ್ಕೆ ಸರಿದರು. ಹೀಗಾಗಿ ಎಚ್.ಎಸ್.ಪ್ರಣಯ್, ಮೊದಲ ಸುತ್ತಿನ ಪಂದ್ಯದಲ್ಲಿ ಜಯ ದಾಖಲಿಸದೇ ಹದಿನಾರರ ಹಂತ ಕಂಡರು.
Japan Open, HS Prannoy, Pre-Quarterfinals