ಟೆಸ್ಟ್ ಇರಲಿ, ಏಕದಿನ ಪಂದ್ಯ ಇರಲಿ ಅಥವಾ ಟಿ20 ಪಂದ್ಯವೇ ಇರಲಿ. ಟೀಮ್ ಇಂಡಿಯಾದ ನಾಯಕನಿಗೆ ಬಿಸಿಸಿಐ ವಿರಾಮ ನೀಡುವ ಯೋಚನೆ ಮಾಡಬಹುದು. ಆದರೆ ಆಲ್ರೌಂಡರ್ ರವೀಂದ್ರ ಜಡೇಜಾ ಇಲ್ಲದ ಪ್ಲೇಯಿಲ್ 11 ನೋಡಲು ಅಸಾಧ್ಯ. ಆ ಮಟ್ಟಿಗೆ ಸೌರಾಷ್ಟ್ರ ಆಲ್ರೌಂಡರ್ ಇಂಪ್ಯಾಕ್ಟ್ ಮಾಡಿದ್ದಾರೆ.
ಜಡೇಜಾ ಟೀಮ್ ಇಂಡಿಯಾಕ್ಕೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಹೀಗೆ ಮೂರೂ ವಿಭಾಗಗಳಲ್ಲೂ ಬೆನ್ನೆಲುಬು. ಟೆಸ್ಟ್ ಪಂದ್ಯಕ್ಕೆ ಬ್ಯಾಟಿಂಗ್ನಲ್ಲಿ ಬೇಕಾದ ಎಚ್ಚರಿಕೆ ಇದೆ. ಏಕದಿನ ಮತ್ತು ಟಿ20 ಪಂದ್ಯದ ಬ್ಯಾಟಿಂಗ್ಗೆ ಬಂದಾಗ ಸ್ಪೋಟಕ ಟಚ್ ಕೊಡುವ ಸಾಮರ್ಥ್ಯವಿದೆ. ಬೌಲಂಗ್ನಲ್ಲಿ ಕಂಟ್ರೋಲ್ ಮತ್ತು ವಿಕೆಟ್ ಕೀಳು ಚಾಕಚಕ್ಯತೆ ಇದೆ. ಫೀಲ್ಡಿಂಗ್ನಲ್ಲಿ ಚಿರತೆಯ ವೇಗವಿದೆ. ಹೀಗಾಗಿ ರವೀಂದ್ರ ಜಡೇಜಾ ಟೀಮ್ ಇಂಡಿಯಾದ ರಿಯಲ್ ಮ್ಯಾನ್.
ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಭಾರತ ಹೀಗೆ ಪಿಚ್ ಯಾವುದು ಬೇಕಾದರೂ ಇರಲಿ. ಜಡೇಜಾ ಅದನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ. ಜವಾಬ್ದಾರಿಯನ್ನು ಮಾತ್ರ ಹೆಗಲ ಮೇಲೆ ಹೊತ್ತುಕೊಳ್ಳುತ್ತಾರೆ. ಬ್ಯಾಟಿಂಗ್ ಆದ ಮೇಲೆ ಬೌಲಿಂಗ್ನಲ್ಲೂ ಜಡೇಜಾ ಬೇಕು. ಅಷ್ಟೇ ಅಲ್ಲ ಫೀಲ್ಡಿಂಗ್ನಲ್ಲೂ ಜಡೇಜಾ ಕೈ ಚಳಕ ತೋರಬೇಕು. ಹೀಗಾಗಿ ಜಡ್ಡು ಈಗ ಸೂಪರ್ ಮ್ಯಾನ್ .
