ISSF: ಅಗ್ರ ಸ್ಥಾನದೊಂದಿಗೆ ಅಭಿಯಾನಕ್ಕೆ ತೆರೆ
ಭಾರತ ಬುಧವಾರ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಅಭಿಯಾನವನ್ನು ಐದು ಚಿನ್ನ, ಆರು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ 15 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಗಿಸಿದೆ.
ಸ್ಪರ್ಧೆಯ ಅಂತಿಮ ದಿನದಂದು, ಪುರುಷರ 25 ಮೀಟರ್ ರ್ಯಾಪಿಡ್ ಫೈರ್ ಪಿಸ್ತೂಲ್ ತಂಡ ಸ್ಪರ್ಧೆಯಲ್ಲಿ ಭಾರತದ ಮೂವರು ಅನಿಶ್ ಭಾನ್ವಾಲಾ, ವಿಜಯವೀರ್ ಸಿಧು ಮತ್ತು ಸಮೀರ್ ಬೆಳ್ಳಿ ಪದಕ ಗೆದ್ದರು. ಭಾರತ ಚಿನ್ನದ ಪದಕದತ್ತ ಚಿತ್ತ ನೆಟ್ಟಿದ್ದರು. ಆದರೆ, ಮಾರ್ಟಿನ್ ಪೊಡ್ರಾಸ್ಕಿ, ತೋಮಸ್ ತೆಹಾನ್ ಮತ್ತು ಮಾತೇಜ್ ರಾಮ್ಪುಲಾ ಅವರ ಉತ್ತಮ ಪ್ರದರ್ಶನ ಬಲದಿಂದ 10-2 ಮುನ್ನಡೆ ಸಾಧಿಸಿದ್ದರು. ಬಳಿಕ ಭಾರತ 15-17 ರಿಂದ ಅಭಿಯಾನ ಮುಗಿಸಿತು.

ಸ್ಕೀಟ್ ಮಿಕ್ಸೆಡ್ ಟೀಮ್ ಈವೆಂಟ್‌ನಲ್ಲಿ, ಭಾರತದ ಜೋಡಿ ಮೈರಾಜ್ ಅಹ್ಮದ್ ಖಾನ್ ಮತ್ತು ಮುಫದ್ದಲ್ ದೀಸಾವಾಲಾ 17 ತಂಡಗಳಲ್ಲಿ 150 ರಲ್ಲಿ 138 ಅಂಕಗಳೊಂದಿಗೆ ಒಂಬತ್ತನೇ ಸ್ಥಾನ ಪಡೆದರು. ಭಾರತವು 2019 ರಲ್ಲಿ ISSF ವಿಶ್ವಕಪ್‌ನ ಎಲ್ಲಾ ಐದು ಹಂತಗಳನ್ನು ಗೆದ್ದಿತ್ತು. ಭಾರತೀಯ ರೈಫಲ್ ಮತ್ತು ಪಿಸ್ತೂಲ್ ಶೂಟರ್‌ಗಳಿಗೆ ಮುಂದಿನ ಗುರಿ ಕೈರೋದಲ್ಲಿ ನಡೆಯಲಿರುವ ಬಹು ನಿರೀಕ್ಷಿತ ISSF ವಿಶ್ವ ಚಾಂಪಿಯನ್‌ಶಿಪ್ ಆಗಿದೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಶೂಟರ್‌ಗಳ ಉತ್ತಮ ಪ್ರದರ್ಶನ ನೀಡಿದರೆ ಪ್ಯಾರಿಸ್‌ನಲ್ಲಿ 2024 ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಹೆಚ್ಚುತ್ತದೆ.