ಐಪಿಎಲ್ 2023ರ ಆವೃತ್ತಿಗೆ ದಿನಗಣನೆ ಶುರುವಾಗಿದ್ದು, ಚುಟುಕು ಕ್ರಿಕೆಟ್ ಮಹಾಸಮರಕ್ಕೆ ಎಲ್ಲಾ ಫ್ರಾಂಚೈಸಿಗಳು ತಯಾರಿ ಆರಂಭಿಸಿವೆ.
ಹೊಸ ಉತ್ಸಾಹ, ಹೊಸ ಆಟಗಾರರ ಬಲದೊಂದಿಗೆ ಎಲ್ಲಾ ತಂಡಗಳು ಪ್ರಸಕ್ತ ಐಪಿಎಲ್ ಆವೃತ್ತಿಯನ್ನ ಎದುರು ನೋಡುತ್ತಿವೆ. ಈ ನಡುವೆ ಸನ್ರೈಸರ್ಸ್ ಹೈದ್ರಾಬಾದ್ ತಂಡ 2023ರ ಐಪಿಎಲ್ ಆವೃತ್ತಿಯಲ್ಲಿ ತಮ್ಮ ತಂಡದ ಕ್ಯಾಪ್ಟನ್ ಯಾರೆಂದು ಘೋಷಿಸಲು ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ.
ಸನ್ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ಫೆ.23ರಂದು ತಮ್ಮ ತಂಡದ ಹೊಸ ಕ್ಯಾಪ್ಟನ್ ಯಾರೆಂದು ಬಹಿರಂಗಪಡಿಸಲಿದೆ. ಈ ಬಾರಿಯ ಟೂರ್ನಿಗೆ ಎಸ್ಆರ್ಎಚ್ ತಂಡದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಹೀಗಾಗಿ ಈ ಆವೃತ್ತಿಯಲ್ಲಿ ಆರೆಂಜ್ ಆರ್ಮಿಯನ್ನ ಮುನ್ನಡೆಸುವ ಸಾರಥಿ ಯಾರು? ಎಂಬ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ.
ARE YOU READY #OrangeArmy? #IPL2023 pic.twitter.com/oXygnjWG1q
— SunRisers Hyderabad (@SunRisers) February 22, 2023
ಸನ್ರೈಸರ್ಸ್ ಹೈದ್ರಾಬಾದ್ ತಂಡದ ಕ್ಯಾಪ್ಟನ್ ರೇಸ್ನಲ್ಲಿ ಕನ್ನಡಿಗ ಮಯಂಕ್ ಅಗರ್ವಾಲ್ ಸೇರಿದಂತೆ ತಂಡದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್, ಸೌತ್ ಆಫ್ರಿಕಾದ ಐಡೆನ್ ಮಾರ್ಕ್ರಂ ಸಹ ರೇಸ್ನಲ್ಲಿದ್ದಾರೆ. ಹೀಗಾಗಿ ಈ ಮೂವರಲ್ಲಿ ತಂಡದ ಮ್ಯಾನೇಜ್ಮೆಂಟ್ ಯಾರಿಗೆ ಮಣೆ ಹಾಕಲಿದೆ ಎಂಬುದು ಕುತೂಹಲದ ಸಂಗತಿಯಾಗಿದೆ.
2023ರ ಐಪಿಎಲ್ ಆವೃತ್ತಿಯು ಮಾರ್ಚ್ 31ರಿಂದ ಆರಂಭವಾಗಲಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆದರೆ. ಸನ್ರೈಸರ್ಸ್ ಹೈದ್ರಾಬಾದ್ ತಂಡ ಏಪ್ರಿಲ್ 2ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದೊಂದಿಗೆ ಐಪಿಎಲ್ ಅಭಿಯಾನ ಆರಂಭಿಸಲಿದೆ.
IPL 2023, Sunrisers Hyderabad, Mayank Agarwal, Bhuvaneshwar Kumar, Sports Karnataka