ಐಪಿಎಲ್ 16ನೇ ಆವೃತ್ತಿಯಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ) ಹಾಗೂ ರಾಜಸ್ಥಾನ್ ರಾಯಲ್ಸ್(ಆರ್ಆರ್) ತಂಡಗಳು ಮುಖಾಮುಖಿ ಆಗುತ್ತಿದ್ದು, ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆಯುವ ಈ ಹಣಾಹಣಿ ಸ್ಪಿನ್ನರ್ಸ್ಗಳ ನಡುವಿನ ಕಾಳಗವಾಗಿದೆ.
ಟೂರ್ನಿಯಲ್ಲಿ ಎರಡು ತಂಡಗಳು ಏರಿಳಿದ ಪ್ರದರ್ಶನ ನೀಡಿದ್ದರು, ಚೆನ್ನೈ ಸೂಪರ್ ಕಿಂಗ್ಸ್ ಇಂದಿನ ಪಂದ್ಯದ ಫೇವರೆಟ್ ಎನಿಸಿದೆ. ಎರಡು ತಂಡಗಳಲ್ಲಿ ಸ್ಪಿನ್ನರ್ಗಳೇ ಪ್ರಮುಖ ಬೌಲರ್ಗಳಾಗಿದ್ದು, ತಮ್ಮ ಚಾಣಾಕ್ಷ ಸ್ಪಿನ್ ಮೋಡಿಯ ಮೂಲಕ ಬ್ಯಾಟರ್ಗಳನ್ನ ಕಟ್ಟಿಹಾಕಲು ಎರಡು ತಂಡದ ಸ್ಪಿನ್ನರ್ಗಳು ರಣತಂತ್ರ ರೂಪಿಸಿಕೊಂಡು ಸಜ್ಜಾಗಿದ್ದಾರೆ.
ತವರಿನಂಗಳದಲ್ಲಿ ನಡೆಯುವ ಪಂದ್ಯದಕ್ಕಾಗಿ ತಯಾರಾಗಿರುವ ಸಿಎಸ್ಕೆ ತಂಡದಲ್ಲಿ ಮಿಚೆಲ್ ಸ್ಯಾಂಟ್ನರ್ ಪ್ರಮುಖ ಸ್ಪಿನ್ನರ್ ಆಗಿ ಕಣಕ್ಕಿಳಿದರೆ. ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ, ಮೊಯಿನ್ ಅಲಿ ಅವರುಗಳು ಸಹ ತಂಡದ ಸ್ಪಿನ್ ಅಸ್ತ್ರವಾಗಿ ತಂಡಕ್ಕೆ ಆಸರೆಯಾಗಲಿದ್ದಾರೆ. ಇವರಿಗೆ ಟಕ್ಕರ್ ನೀಡಲು ರಾಜಸ್ಥಾನ್ ರಾಯಲ್ಸ್ ತಂಡದ ತ್ರಿವಳ ಸ್ಪಿನ್ನರ್ಗಳು ಸಹ ಸಜ್ಜಾಗಿದ್ದಾರೆ. ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಲ್ ಅವರೊಂದಿಗೆ ಮುರುಗನ್ ಅಶ್ವಿನ್ ಸಹ ಚೆನ್ನೈ ಬ್ಯಾಟರ್ಗಳಿಗೆ ಕಡಿವಾಣ ಹಾಕಲು ಕಾಯುತ್ತಿದ್ದಾರೆ.
ಐಪಿಎಲ್ನಲ್ಲಿ ಉಭಯ ತಂಡಗಳು ಈವರೆಗೂ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಸಿಎಸ್ಕೆ 15 ಬಾರಿ ಗೆಲುವು ಸಾಧಿಸಿದ್ದರೆ. ರಾಜಸ್ಥಾನ್ 11 ಪಂದ್ಯಗಳಲ್ಲಿ ಜಯದ ನಗೆಬೀರಿದೆ. ಈ ನಡುವೆ ಇಂದಿನ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿರುವುದರಿಂದ ಚೆನ್ನೈ ತಂಡಕ್ಕೆ ಪ್ರಾಬಲ್ಯ ಹೆಚ್ಚಾಗಿದ್ದು ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ.
IPL 2023, Chennai Super Kings, Rajasthan Royals, MS Dhoni, Sanju Samson,